ಜಗನ್ನಾಥದಾಸರ ಪೂರ್ವಾರಾಧನೆ ಸಂಪನ್ನ

Manvi Jaganadh Das
ಮಾನ್ವಿಯ ರಾಯರ ಮಠದಲ್ಲಿ ಜಗನ್ನಾಥ ದಾಸರ ಕಂಬಸ್ತಂಭಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
Published on

ಮಾನ್ವಿ: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಜಗನ್ನಾಥ ದಾಸರ 216ನೇ ಆರಾಧನಾ ಮಹೋತ್ಸವ ನಿಮಿತ್ತ ಪೂರ್ವಾರಾಧನೆ ಜರುಗಿತು.

ಬೆಳಗ್ಗೆ ಸುಪ್ರಭಾತ, ಸಾಮೂಹಿಕ ಹರಿಕಥಾಮೃತಸಾರ ಪಾರಾಯಣ, ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಜಗನ್ನಾಥ ದಾಸರ ಕಂಬಸ್ತಂಭಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ರಾಯಚೂರಿನ ವಿದ್ವಾನ್ ಶೇಷಗಿರಿದಾಸ ಅವರಿಂದ ದಾಸರ ಹಾಗೂ ಭಕ್ತಿಗೀತೆಗಳ ಗಾಯನ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ, ಸ್ವಸ್ತಿವಾಚನ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net