ದೇಶದಲ್ಲಿ 2.95 ಕೋಟಿ ಮನೆ ನಿರ್ಮಿಸುವ ಗುರಿ

Jagaluru, pradhan mantri avas, hakkupatra,
Published on

ಜಗಳೂರು: ದೇಶದ ಪ್ರತಿ ಬಡವನಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಮಾರು 2.95 ಕೋಟಿ ಮನೆ ನಿರ್ಮಿಸುವ ಗುರಿ ಹೊಂದಿದ್ದಾರೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.

ತಾಲೂಕಿನ ಅಸಗೋಡು ಗ್ರಾಮದಲ್ಲಿ ಸೋಮವಾರ ಜಿಲ್ಲಾ ಮತ್ತು ತಾಪಂ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ) ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ 2015ರಲ್ಲಿ ಪ್ರಾರಂಭವಾಗಿದ್ದು, ಕೈಗೆಟುಕುವ ದರದಲ್ಲಿ ಸುಮಾರು 20 ಮಿಲಿಯನ್ ಮನೆ ನಿರ್ಮಿಸುವ ಗುರಿ ಹೊಂದಿದ್ದು, ಗ್ರಾಮೀಣ ಭಾಗದಲ್ಲಿ 2024ರ ವರೆಗೆ ವಿಸ್ತರಿಸಲಾಗಿದೆ. ಪಕ್ಕಾ ಮನೆಗಳನ್ನು ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ಸುಮಾರು 2.95 ಕೋಟಿ ಮನೆಗಳಿಗೆ ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯೋಜನೆಯಡಿ ಎಲ್ಲ ವಸತಿ ರಹಿತರು ಮತ್ತು ಪಾಳುಬಿದ್ದ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬಹುದು ಎಂದರು.

ಎಸ್.ವಿ. ರಾಮಚಂದ್ರ ಮಾಜಿ ಶಾಸಕ ಆಗಿರಬಹುದು. ಆದರೆ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದರು. ಆದರೆ, ನೂತನ ಶಾಸಕರಾಗಿರುವ ಬಿ.ದೇವೇಂದ್ರಪ್ಪ ಅವರಿಗೂ ನನ್ನ ಸಹಕಾರವಿದೆ ಎಂದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸೋತರೂ ನಿಮ್ಮನ್ನು ನೋಡುವ ಆಸೆಯಿಂದ ಬಂದಿದ್ದೇನೆ. ಎಲ್ಲರಿಗೂ ಸೂರು- ನೀರು ಒದಗಿಸುವ ಕೆಲಸ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಆಸೆಯಂತೆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇದಕ್ಕಾಗಿ ಫಲಾನುಭವಿಗಳು ಯಾರಿಗೂ ಹಣ ನೀಡುವಂತಿಲ್ಲ ಎಂದು ಹೇಳಿದರು.

ತಾಪಂ ಇಒ ಚಂದ್ರಶೇಖರ್, ಪಿಡಿಒಗಳಾದ ಮರುಳಸಿದ್ದಪ್ಪ, ತಿಮ್ಮೇಶ್, ವಾಸು, ಗ್ರಾಪಂ ಅಧ್ಯಕ್ಷರಾದ ರೇಣುಕಮ್ಮ ಸಿದ್ದೇಶ್, ಹಾಲೇಕಲ್ಲು ಬಸವರಾಜಪ್ಪ, ಉಪಾಧ್ಯಕ್ಷೆ ನಾಗಮ್ಮ, ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಸಿ. ಮಹೇಶ್, ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ಶಿವಕುಮಾರ್ ಸ್ವಾಮಿ, ವಸತಿ ಯೋಜನಾಧಿಕಾರಿ ತಿಮ್ಮೇಶ್, ಗ್ರಾಪಂ ಸದಸ್ಯರಾದ ಜಿ.ಎಂ. ರವಿಕುಮಾರ್, ನಾಗರಾಜ್, ಎಚ್.ಆರ್. ಬಸವರಾಜ್, ಶಂಕರಪ್ಪ, ನಸರುಲ್ಲ, ವೀರಮ್ಮ, ಶಿಲ್ಪಾ, ಸರೋಜಮ್ಮ, ಲಲಿತಮ್ಮ, ರೇಷ್ಮಾ, ಶಕುಂತಲಮ್ಮ, ರೇಣುಕಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net