ಜಗಳೂರು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪ

JLR Poura Sanmana Jun 10 (1)
Published on

ಜಗಳೂರು: ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪೌರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

2011ರ ಜನಗಣತಿಯ ಪ್ರಕಾರ 17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿತ್ತು. ಆದರೆ, ಈಗ ಎರಡು ಪಟ್ಟು ಜನರಿದ್ದಾರೆ. ಆದರೆ, ಇಷ್ಟು ಜನರಿಗೆ ಕೇವಲ 32 ಪೌರಕಾರ್ಮಿಕರು ಪಟ್ಟಣದ ಪ್ರತಿ ಬೀದಿ, ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವುದು ಸುಲಭವಲ್ಲ. ಹಾಗಾಗಿ, ಪೌರಕಾರ್ಮಿಕರ ಮೇಲೆ ಜವಾಬ್ದಾರಿ ಹಾಕುವುದಕ್ಕಿಂತ ಆಯಾ ವಾರ್ಡ್‌ಗಳ ನಿವಾಸಿಗಳು ಎಲ್ಲೆಂದರಲ್ಲಿ ಕಸದ ರಾಶಿ ಹಾಕದೇ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ನಾವು ಆರೋಗ್ಯದಿಂದ ಬದುಕಬೇಕು ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ 19 ಅಕೃತ, 13 ನೋಂದಣೆ ಆಗದ ಸೇರಿ 32 ಬಡಾವಣೆಗಳಿವೆ. ಇದರಲ್ಲಿ 19 ಬಡಾವಣೆಗಳಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಉಳಿದವುಗಳಿಗೆ ಯಾವುದೇ ಸೌಲಭ್ಯವು ಇಲ್ಲದೇ ನಿವೇಶನಗಳು ನೋಂದಣಿ ಆಗದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವೇ ಸಂಬಂಸಿ ಸಚಿವರ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಪಡೆಯುವ ಪ್ರಯತ್ನ ಮಾಡುತ್ತೇನೆ ಎಂದರು.

ಪಪಂ ಸದಸ್ಯ ರಮೇಶ್ ಮಾತನಾಡಿ, ಬಹುತೇಕ ಪೌರಕಾರ್ಮಿಕರು ಸ್ವತಃ ಮನೆಗಳಿಲ್ಲದೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕೆಲವರು ಬೇರೆ ಕಡೆಯಿಂದ ಓಡಾಡುತ್ತಿದ್ದಾರೆ. ಹಾಗಾಗಿ, ಎಲ್ಲರಿಗೂ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಿ ಅದಕ್ಕೆ ಪೌರಕಾರ್ಮಿಕರ ಬಡಾವಣೆ ಮಾಡಿದರೆ ಎಲ್ಲರಿಗೂ ಅನುಕೂಲಾಗುತ್ತದೆ ಎಂದರು.

ಇದೇ ವೇಳೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ಪಟ್ಟಣ ಪಂಚಾಯಿತಿ ಆಡಳಿತ ವರ್ಗ ಹಾಗೂ ಪೌರಕಾರ್ಮಿಕರು ಗೌರವಿಸಿದರು. ತಹಸೀಲ್ದಾರ್ ಸಂತೋಷ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಕಾರಿ ಬಿ. ಮಹೇಶ್ವರಪ್ಪ, ಪಪಂ ಮುಖ್ಯಾಕಾರಿ ಲೋಕ್ಯನಾಯ್ಕ, ಪಪಂ ಸದಸ್ಯರಾದ ರಮೇಶ್, ಮಂಜುನಾಥ್, ಲುಕ್ಮಾನ್, ಆರ್.ತಿಪ್ಪೇಸ್ವಾಮಿ, ಮಹಮದ್, ದೇವರಾಜ್, ರೇವಣಸಿದ್ದಪ್ಪ, ರವಿಕುಮಾರ್, ಮಹಾಲಿಂಗಪ್ಪ, ಶಕೀಲ್, ಲಲಿತಾ ಶಿವಣ್ಣ, ಸರೋಜಮ್ಮ, ವಿಶಾಲಾಕ್ಷಿ, ಮಂಜಮ್ಮ, ಲೋಕಮ್ಮ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ಆರೋಗ್ಯ ನಿರೀಕ್ಷಕ ಕಿಾಯತ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net