ಬೆಂಕಿಯಿಂದ ಮೆಕ್ಕೆಜೋಳ ತೆನೆ ಭಸ್ಮ

JLR ph 1 Nov 22 Benki Avagada
Published on

ಜಗಳೂರು: ತಾಲೂಕಿನ ತಮಲೇಹಳ್ಳಿಯ ಕಣವೊಂದರಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆಯ ರಾಶಿಗೆ ಶನಿವಾರ ಆಕಸ್ಮಿಕ ಬೆಂಕಿ ತಗುಲಿ ಹಾನಿ ಸಂಭವಿಸಿದೆ.

ರೈತ ಅಂಜಿನಪ್ಪ ಅವರ 4.28 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆ ಹಾಗೂ ಜಾನುವಾರುಗಳ ಮೇವಿಗಾಗಿ ಖರೀದಿಸಿದ್ದ 4.5 ಲೋಡ್ ಸೊಪ್ಪೆ ಬೆಂಕಿಗೆ ಆಹುತಿಯಾಗಿದೆ.

ಜಮೀನಿನಲ್ಲಿ ಫಸಲು ಮುರಿಸಿ ಸಮೀಪದ ಕಣದಲ್ಲಿ ದಾಸ್ತಾನು ಮಾಡಲಾಗಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನಂದಿಸುವ ಪ್ರಯತ್ನ ಮಾಡಿದರೂ ಉಪಯೋಗವಾಗಿಲ್ಲ ಎಂದು ರೈತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net