ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದು

Jagaluru, Lecture, Program,
Published on

ಪ್ರಭಾರ ಪ್ರಾಚಾರ್ಯ ಮಧು ಹೇಳಿಕೆ I ಜಗಳೂರಲ್ಲಿ ವಿಶೇಷ ಉಪನ್ಯಾಸ

ಜಗಳೂರು: ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಭಾರ ಪ್ರಾಚಾರ್ಯ ಮಧು ಹೇಳಿದರು.

ಪಟ್ಟಣದ ಹೋ.ಚಿ. ಬೋರಯ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಮಾಜಿ ಅರೆ ಸೇನೆ ಸಂಘ ಜಗಳೂರು ಘಟಕ ಹಾಗೂ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ರಕ್ಷಣೆಯಲ್ಲಿ ಪ್ಯಾರಾ ಮಿಲಿಟರಿಗಳ ಪಾತ್ರ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೈನಿಕರು ಕುಟುಂಬ ತೊರೆದು ದೇಶ ರಕ್ಷಣೆಗಾಗಿ ಗಡಿ ಭಾಗದಲ್ಲಿ ಹಾಗೂ ದಟ್ಟವಾದ ಕಾಡು, ಹಿಮ ಪರ್ವತಗಳಲ್ಲಿ ಮಳೆ, ಗಾಳಿ ಎನ್ನದೇ ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸುತ್ತಾರೆ. ಇಂಥ ಆದರ್ಶ ವ್ಯಕ್ತಿಗಳನ್ನು ಎಲ್ಲರೂ ಅನುಸರಿಸಬೇಕು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಹ್ಲಾದ ರೆಡ್ಡಿ, ಘಟಕದ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಜಯಣ್ಣ, ನಾಗರಾಜಪ್ಪ ಖಜಾಂಚಿ ಮಹಾಂತೇಶ್, ನಿರ್ದೇಶಕರಾದ ಬಸವರಾಜ್, ಬಳ್ಳಾರಿ ಘಟಕದ ನಿರ್ದೇಶಕ ಶೇಕ್‌ಸಾಬ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net