ಕರೊನಾ ತಡೆಗೆ ನಾಗರಿಕರ ಸಹಕಾರ ಅಗತ್ಯ

jlr karave 18 edit
ಜಗಳೂರಿನಲ್ಲಿ ಶುಕ್ರವಾರ ಕರವೇ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಗೆ ಹಣ್ಣು ವಿತರಿಸಿದರು. ಪಿಎಸ್‌ಐ ಉಮೇಶ್ ಬಾಬು, ಕರವೇ ಅಧ್ಯಕ್ಷ ವೈ.ಮಹಾಂತೇಶ್, ಹಫೀಜ್ ಇತರರಿದ್ದರು.
Published on

ಜಗಳೂರು: ಲಾಕ್‌ಡೌನ್ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರವೇ ಕಾರ್ಯಕರ್ತರು ಶುಕ್ರವಾರ ಹಣ್ಣು ಮತ್ತು ಕುಡಿವ ನೀರಿನ ಬಾಟಲಿ ವಿತರಿಸಿ ಅಭಿನಂದಿಸಿದರು.

ವೇದಿಕೆ ಅಧ್ಯಕ್ಷ ವೈ.ಮಹಾಂತೇಶ್ ಮಾತನಾಡಿ, ಸೋಂಕು ತಡೆಗೆ ಪೊಲೀಸರೊಂದಿಗೆ ನಾಗರಿಕರ ಸಹಕಾರ ಅಗತ್ಯವಾಗಿದೆ. ಅವರು ತಮ್ಮ ಪ್ರಾಣ ಪಣಕಿಟ್ಟು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಪಿಎಸ್‌ಐ ಉಮೇಶ್ ಬಾಬು ಮಾತನಾಡಿ, ಪೊಲೀಸ್ ಇಲಾಖೆಯಿಂದ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ಅಗತ್ಯ ಎಂದು ತಿಳಿಸಿದರು.

ಪಪಂ ಮಾಜಿ ಅಧ್ಯಕ್ಷ ಮೊಬೈಲ್ ಮಂಜಣ್ಣ, ಗ್ರಾಮದ ಮುಖಂಡ ಶಿವನಗೌಡ, ವೇದಿಕೆ ಪದಾಧಿಕಾರಿ ಹಫೀಜ್, ಅಯ್ಯಪ್ಪಸ್ವಾಮಿ ಸಮಿತಿ ಮಲ್ಲಿಕಾರ್ಜುನ, ಉಪನ್ಯಾಸಕ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net