ಶೈಕ್ಷಣಿಕ ಪ್ರಗತಿಯಿಂದ ದೇಶದ ಅಭಿವೃದ್ಧಿ

Jagaluru, for students, kit, distribution,
Published on

ಕ್ಷೇತ್ರ ಅಧಿಕಾರಿ ತಿಮ್ಮೇಶ್ ಅಭಿಪ್ರಾಯ I ಜಗಳೂರಲ್ಲಿ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ

ಜಗಳೂರು: ದೇಶ ಅಭಿವೃದ್ಧಿ ಸಾಧಿಸಲು ಮಕ್ಕಳು ಶಿಕ್ಷಣವಂತರಾಗಬೇಕು ಎಂದು ಗೂಂಜ್ ಸಂಸ್ಥೆಯ ಕ್ಷೇತ್ರ ಅಧಿಕಾರಿ ತಿಮ್ಮೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಗೂಂಜ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮದು ಸರ್ಕಾರೇತರ ಸಂಸ್ಥೆಯಾಗಿದ್ದು, ಅತಿ ಹಿಂದುಳಿದ, ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಕಲಿಕಾ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.

ಮಕ್ಕಳು ವಿದ್ಯಾವಂತರಾಗಿ ಭವಿಷ್ಯದಲ್ಲಿ ನೌಕರಿ ಪಡೆದು ನೀವು ಸಹ ಬಡತನದಲ್ಲಿ ಓದುವ ಮಕ್ಕಳಿಗೆ ಸಹಾಯ ಮಾಡುವ ಗುಣಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.

ಪತ್ರಕರ್ತ ಆರ್.ಎಲ್.ಜಗಜೀವನ್‌ರಾಮ್ ಮಾತನಾಡಿ, ಮಕ್ಕಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ವಿದ್ಯಾವಂತರಾಗಿ ಪಾಲಕರು, ಶಿಕ್ಷಕರಿಗೆ ಕೀರ್ತಿ ತರಬೇಕು. ಬಡತನದ ನೆಪವೊಡ್ಡಿ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಅಂಥವರನ್ನು ಆದರ್ಶವಾಗಿ ತೆಗೆದುಕೊಂಡು ಜೀವನದಲ್ಲಿ ಸಾಧನೆಯ ಹಾದಿ ಹಿಡಿಯಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ಗೋವಿಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕೊಟ್ರೇಶ್, ಸಹ ಶಿಕ್ಷಕರಾದ ರಾಜು, ನಾಗಲಕ್ಷ ್ಮಮ್ಮ, ಆಶಾ ಕಾರ್ಯಕಾರ್ಯೆ ಶಶಿಕಲಾ, ಅಡುಗೆ ಸಿಬ್ಬಂದಿ ಪಾರ್ವತಮ್ಮ, ರಾಯಿಮಾಬಿ, ನಿವೃತ್ತ ಶಿಕ್ಷಕಿ ಸುಂದರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net