

ಜಗಳೂರು: ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿ, 22 ಟ್ರಾೃಕ್ಟರ್ ಲೋಡ್ ಮೆಕ್ಕೆಜೋಳದ ತೆನೆ ಹಾನಿಯಾಗಿದೆ.
ಶಾಂತಮ್ಮ ಎಂಬುವರ 20 ಲೋಡ್, ಕರಿಬಸಪ್ಪಗೆ ಸೇರಿದ 2 ಲೋಡ್ ಒಟ್ಟು 22 ಟ್ರಾೃಕ್ಟರ್ ಲೋಡ್ ಮೆಕ್ಕೆಜೋಳ ಬೆಂಕಿಗೆ ಆಹುತಿಯಾಗಿದೆ. ಇವರು ಜಮೀನಿನಿಂದ ತೆನೆ ಮುರಿದು ತಂದು ಕಣದಲ್ಲಿ ಸಂಗ್ರಹಿಸಿದ್ದರು.
ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದಾಗಿ ಶಾಂತಮ್ಮ ಅವರ 500 ಕ್ವಿಂಟಾಲ್, ಕರಿಬಸಪ್ಪ ಅವರ 50 ಕ್ವಿಂಟಾಲ್ ಮೆಕ್ಕೆಜೋಳ ಸುಟ್ಟು ಹೋಗಿ ಅಂದಾಜು 6 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.