ಜಗಳೂರನ್ನು ಸಂಪೂರ್ಣ ಬರಪಟ್ಟಿಗೆ ಸೇರಿಸಲು ಆಗ್ರಹ

jagaluru, bara
Published on

ಜಗಳೂರು: ತಾಲೂಕನ್ನು ಬರಪಟ್ಟಿಗೆ ಸೇರ್ಪಡೆ, ಹಗಲಿನಲ್ಲಿ ಏಳು ತಾಸು ವಿದ್ಯುತ್, ಬೆಳೆ ಹಾನಿ ಪರಿಹಾರ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.

ಜಾನುವಾರುಗಳಿಗೆ ಶೀಘ್ರವೇ ಗೋಶಾಲೆಗಳನ್ನು ತೆರೆಯಬೇಕು. ಪ್ರತಿ ಜಾನುವಾರುಗಳಿಗೂ ಸರ್ಕಾರವೇ ಮೇವು, ನೀರು, ನೆರಳು ಕಲ್ಪಿಸಬೇಕು. ಬ್ಯಾಂಕ್‌ಗಳು, ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿಸುವಂತೆ ರೈತರಿಗೆ ಬಲವಂತ ಮಾಡುವಂತಿಲ್ಲ. ಸಾಲದ ನೆಪದಲ್ಲಿ ದೌರ್ಜನ್ಯ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಗಡಿಮಾಕುಂಟೆ ಕೆ.ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ ್ಮಣ್ ನಾಯಕ, ಜಂಟಿ ಕಾರ್ಯದರ್ಶಿ ಬಿ.ಕುಮಾರ್, ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಎಂ.ಎಸ್. ರವೀಂದ್ರನಾಥ್, ಲೋಕೇಶ್, ಸಕ್ರೇಶ್, ರಾಜಪ್ಪ, ಮಂಜಪ್ಪ, ಓಬಯ್ಯ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net