ರಾತ್ರೋರಾತ್ರಿ ಅಡಕೆ ಸಸಿ ಕಿತ್ತು ವಿಕೃತಿ

Jagaluru, adake sasi, destroyed,
Published on

ಜಗಳೂರು: ಜಮೀನಿನಲ್ಲಿ ನಾಟಿ ಮಾಡಲಾಗಿದ್ದ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ಕಿತ್ತು ಹಾಕಿ ವಿಕೃತಿ ಮೆರೆದಿರುವ ಘಟನೆ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಗ್ರಾಮದ ರೈತ ಎಸ್.ಬಿ. ಪ್ರದೀಪ್ ಅವರು ಗ್ರಾಮದ ಹೊರವಲಯದ 4 ಎಕರೆ ಜಮೀನಿನಲ್ಲಿ ಕಳೆದ 25 ದಿನಗಳ ಹಿಂದೆ ಸಸಿ ನಾಟಿ ಮಾಡಿದ್ದರು.

ನಾಟಿ ಮಾಡಿದ ಸಸಿಗಳಲ್ಲಿ ಅಂದಾಜು 30ಕ್ಕೂ ಹೆಚ್ಚು ಸಸಿಗಳನ್ನು ರಾತ್ರೋರಾತ್ರಿ ಕಿತ್ತು ಹಾಕಿದ್ದಾರೆ. ಜಮೀನು ಮಾಲೀಕ ನೀಡಿದ ದೂರಿನ ಮೇರೆಗೆ ಜಗಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net