ಎಸ್‌ಬಿಐನಿಂದ ಆಹಾರ ಕಿಟ್ ವಿತರಣೆ

JLR ph3 April 23 SBI Kitt vitarane
Published on

ಜಗಳೂರು: ಕರೊನಾ ತಡೆಗೆ ಲಾಕ್‌ಡೌನ್ ಹಿನ್ನೆಲೆ ಆಹಾರದ ಕೊರತೆ ನೀಗಿಸಲು 50 ಅಂಗವಿಕಲರು, ವಿಧವೆಯರು ಸೇರಿದಂತೆ ಬಡ ಕುಟುಂಬಗಳಿಗೆ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್ ಕೃಷ್ಣರಾಜ್ ಗುರುವಾರ ಆಹಾರ ಕಿಟ್ ವಿತರಿಸಿದರು.

ಪಟ್ಟಣದ ಜೆಸಿಆರ್ ಬಡಾವಣೆ ಹಾಗೂ ಮಂಜುನಾಥ ಬಡಾವಣೆಯ ಬಡ ಕುಟುಂಬಗಳಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋ ಹಿಟ್ಟು, 1 ಕೆಜಿ ಬೇಳೆ, 1 ಲೀಟರ್ ಎಣ್ಣೆ ಇತರೆ ದಿನಸಿ ಪಾಕೆಟ್ ನೀಡಲಾಯಿತು.

ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್ ಕೃಷ್ಣರಾಜ್ ಮಾತನಾಡಿ, ತಾಲೂಕಿನಲ್ಲಿ ಕೂಲಿ ಮಾಡಿ ಬದುಕುವ ಕುಟುಂಬಗಳೇ ಹೆಚ್ಚಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಡವರಿಗೆ ಏನಾದರೂ ಸಹಾಯ ಮಾಡಬೇಕೆಂದುಕೊಂಡು ನಮ್ಮ ಸಿಬ್ಬಂದಿ ಸಹಕಾರದಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಇದು ಒಂದು ವಾರಕ್ಕೆ ನೆರವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net