ಸ್ವಾತಂತ್ರೃ ಚಳವಳಿಯಲ್ಲಿ ಮಿಂಚಿದ ಬೆಳ್ಳಿಚುಕ್ಕಿ

Jagalur, Channamma
Published on

ಜಗಳೂರು: ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷ್ ಸೈನ್ಯದ ವಿರುದ್ಧ ಕೆಚ್ಚೆದೆಯಿಂದ ಸ್ವಾತಂತ್ರೃಕ್ಕಾಗಿ ಸೆಣೆಸಾಡಿದ ಕಿತ್ತೂರು ರಾಣಿ ಚನ್ನಮ್ಮ ಹೋರಾಟದ ಬೆಳ್ಳಿಚುಕ್ಕಿಯಾಗಿ ಮಿಂಚಿದವರು ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಹೇಳಿದರು.

ಪಟ್ಟಣದ ಆರ್‌ವಿಎಸ್ ಶಾಲಾ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪಂಚಮಸಾಲಿ ಸಮಾಜದ ಹಮ್ಮಿಕೊಂಡಿದ್ದ ಕಿತ್ತೂರುರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಶುರುವಾದಾಗ ಚನ್ನಮ್ಮ ಪುರುಷರಂತೆ ಬ್ರಿಟಿಷರ ವಿರುದ್ಧ ಗರ್ಜಿಸಿದಳು. ಬ್ರಿಟಿಷರಿಗೆ ತಲೆಬಾಗದೆ ವೀರಾವೇಷದಿಂದ ಹೋರಾಡಿ ಇತಿಹಾಸದ ಪುಟ ಸೇರಿದ್ದಾರೆ. ಇಂತಹ ಮಹಾನ್ ಹೋರಾಟಗಾರ್ತಿಯ ಬಗ್ಗೆ ಈಗಿನ ಪೀಳಿಗೆಗೆ ತಿಳಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳೇ ಕಳೆದಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಲಕ್ಷಾಂತರ ಹಿರಿಯರು ತ್ಯಾಗ, ಬಲಿದಾನ ಮಾಡಿದ್ದು, ಅಂತಹ ಮಹನೀಯರನ್ನು ಸ್ಮರಿಸಬೇಕು ಎಂದರು.

ಪ್ರಾಚಾರ್ಯ ಕಲ್ಲೇಶ್ ಮತಾನಾಡಿ, ಹರ ಹರ ಮಹಾದೇವ ಎಂಬುದು ಯುದ್ಧದ ಮೂಲ ಮಂತ್ರವಾಗಿತ್ತು. ಈಸ್ಟ್ ಇಂಡಿಯಾ ಕಂಪನಿಗೆ ಕಾಣಿಕೆ ಕೊಡದೆ ಬ್ರಿಟಿಷರ ವಿರುದ್ಧ ಹೋರಾಡಿ ಮಾಡಿ ಮಡಿದ ದಿಟ್ಟ ಮಹಿಳೆ ಚನ್ನಮ್ಮ ಎಂದು ಬಣ್ಣಿಸಿದರು.

ತಾಪಂ ಮಾಜಿ ಸದಸ್ಯ ಸದಸ್ಯ ಗಡಿಮಾಕುಂಟೆ ಸಿದ್ದೇಶ್, ಪಂಚಮಸಾಲಿ ತಾಲೂಕು ಅಧ್ಯಕ್ಷ ಯು.ಜಿ. ಶಿವಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಅಜ್ಜಯ್ಯ ನಾಡಿಗರ್, ಆರ್‌ವಿಎಸ್ ಶಾಲೆ ಕಾರ್ಯದರ್ಶಿ ವೀರೇಶ್, ಕೆಚ್ಚೇನಹಳ್ಳಿ ಮುರಿಗಪ್ಪ, ವೀಣಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net