ಮಾತ್ರೆ, ಔಷಧ ವಿತರಣೆ

JLR ph3 April 17 Tablets Vitrane edit
ಜಗಳೂರಿನ ತಾಲೂಕು ಕಚೇರಿಯಲ್ಲಿ ಶುಕ್ರವಾರ ಅಸ್ತಮಾ ರೋಗಿಗೆ ಶಾಸಕ ಎಸ್.ವಿ.ರಾಮಚಂದ್ರ ಅವರ ಮೂಲಕ ಮಾತ್ರೆ ಮತ್ತು ಔಷಧವನ್ನು ವಿತರಿಸಲಾಯಿತು.
Published on

ಜಗಳೂರು: ಅಸ್ತಮಾ ರೋಗದಿಂದ ಬಳಲುತ್ತಿದ್ದ ರೋಗಿಗೆ ಲಾಕ್‌ಡೌನ್ ಹಿನ್ನೆಲೆ ಮಾತ್ರೆ, ಔಷಧ ಖರೀದಿಸಲು ಹಣವಿಲ್ಲದೇ ವಾರದಿಂದ ಅಲೆದಾಡುತ್ತಿದ್ದ ಅಂಧರ ಕುಟುಂಬಕ್ಕೆ ಪಪಂ ಸದಸ್ಯ ನವೀನ್‌ಕುಮಾರ್ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ಎಸ್ಸಿ ಜಾತಿಗೆ ಸೇರಿದ ಗಂಗಮ್ಮ ಮತ್ತು ಮೈಲಪ್ಪ ದಂಪತಿ ಇಬ್ಬರು ಅಂಧ ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಈತ ಸಣ್ಣ-ಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಪತ್ನಿ ಗಂಗಮ್ಮ ಅಸ್ತಮಾದಿಂದ ಬಳಲುತ್ತಿದ್ದಾರೆ.

ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೇ ಔಷಧ ಖರೀದಿಗೆ ಹಣವಿಲ್ಲದೇ ಅಲೆದಾಡುತ್ತಿರುವುದನ್ನು ಗಮನಿಸಿದ ಸದಸ್ಯ ನವೀನ್‌ಕುಮಾರ್ 2,300 ರೂ.ಗಳ ಮಾತ್ರೆ ಮತ್ತು ಔಷಧವನ್ನು ಶಾಸಕ ಎಸ್.ವಿ.ರಾಮಚಂದ್ರ ಅವರ ಮೂಲಕ ರೋಗಿಗಳಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net