

ವಿಜಯಪುರ : ಸ್ಥಳಿಯ ಜಗಜ್ಯೋತಿ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಮೋ ಸಾಧನೆಗೈದಿದ್ದಾರೆ.ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿವಿಧ ಕ್ರೀಡಾಕೂಟದಲ್ಲಿ ವಿದ್ಯಾರ್ಥಿ ರೋಹನ್ ರಾಠೋಡ 100 ಮೀ. ಓಟ, 110 ಅಡೆತಡೆ ಓಟ ಹಾಗೂ 400 ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ, ನಾಗರಾಜ್ ವಡ್ಡರ 200 ಮೀ. ಓಟ, 400 ಮೀ. ಓಟ ಹಾಗೂ 800 ಮೀ. ಓಟದಲ್ಲಿ ಪ್ರಥಮ ಸ್ಥಾನ, ಜಿಯಾನ್ ಜಮಾದಾರ್ 100 ಮೀ. ಓಟ, 200 ಮೀ. ಓಟದಲ್ಲಿ ಹಾಗೂ 400 ಮೀ. ಓಟದಲ್ಲಿ ಪ್ರಥಮ ಸ್ಥಾನ, ಮೊಹಮ್ಮದ್ ಅನಸ್ ಹೈಜೆಂಪ್ನಲ್ಲಿ ದ್ವೀತಿಯ, ಶಂಕರಗೌಡ ಬಿರಾದರ್ ಪೋಲ್ವಾಟ್ದಲ್ಲಿ ದ್ವೀತಿಯ, ರಮ್ಯ ಕದಂ 400 ಮೀ. ಓಟದಲ್ಲಿ, 110 ಅಡೆತಡೆ ಓಟದಲ್ಲಿ ಹಾಗೂ 400 ಮೀ. ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿ ಐಶ್ವರ್ಯ ಎಳೆಮೇಲಿ 800 ಮೀ. ಓಟದಲ್ಲಿ, 4*100 ರಿಲೇ ಹಾಗೂ 4*400 ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ, ರಮ್ಯ ಕದಂ,ರೋಹನ್ ರಾಠೋಡ ಹಾಗೂ ನಾಗರಾಜ್ ವಡ್ಡರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಸಂಸ್ಥೆಗೆ ಒಟ್ಟು 25 ಮೆಡಲ್ ತರುವ ಮೂಲಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಎಲ್.ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಮೋ ಸಾಧನೆಗೈದ ವಿಜಯಪುರದ ಜಗಜ್ಯೋತಿ ಬಸವೇಶ್ವರ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಸಿಬ್ಬಂದಿಗಳಿದ್ದಾರೆ.