ಜಗದೀಶ ಮೆಟಗುಡ್ಡ ಕಾರ್ಯ ಸ್ಮರಣೀಯ

21blh1 bd jagadhish metagud
Published on

ಬೈಲಹೊಂಗಲ: ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರು ಶಾಸಕರಾಗಿದ್ದ ಅವ-ಧಿಯಲ್ಲಿ ಬೈಲಹೊಂಗಲ ೇತ್ರದಲ್ಲಿ ಕೈಗೊಂಡಿದ್ದ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಹಾಗೂ ಜಮೀನುಗಳ ರಸ್ತೆ ಸುಧಾರಣೆ ಸೇರಿ ಅನೇಕ ಜನಪರ ಕಾರ್ಯಗಳನ್ನು ಜನ ಮರೆತಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯ ಗುರು ಮೆಟಗುಡ್ಡ ಹೇಳಿದರು.

ಪಟ್ಟಣದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ 65ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಮಂಡಲ ವತಿಯಿಂದ ಸ್ಥಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳಿಗೆ ಹಣ್ಣು& ಹಂಪಲು ವಿತರಿಸಿ ಮಾತನಾಡಿದರು.

ಮಂಡಲ ಅಧ್ಯ ಸುಭಾಸ ತುರಮರಿ ಮಾತನಾಡಿ, ಅ-ಧಿಕಾರ ಇಲ್ಲದಿದ್ದರೂ ಮೆಟಗುಡ್ಡ ಕುಟುಂಬ ಪ ಸಂಟನೆಯೊಂದಿಗೆ ೇತ್ರದ ಜನರ ಸೇವೆ ಮಾಡುತ್ತ ಬಂದಿದೆ. ಹೀಗಾಗಿ, ಜನರ ಆಶೀರ್ವಾದ ಸದಾ ಹೀಗೆ ಇರಲಿ ಎಂದರು.

ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್​ ಕಡಿ, ಮುಖಂಡರಾದ ಮಹಾಂತೇಶ ಜಿಗಜಿನ್ನಿ, ಆನಂದ ತುರಮರಿ, ಸಂತೋಷ ರಾಯರ, ಗೌಡಪ್ಪ ಹೊಸಮನಿ, ಬಸವರಾಜ ಗುರವನ್ನವರ, ರವಿ ಹೊಸೂರ, ಪ್ರವಿಣ ಶಿಂಗಾರಿ, ರಾು ಕುಮಚಿ, ಶ್ರೀಶೈಲ ಕಟ್ಟಿಮನಿ, ಮಲ್ಲಿಕಾರ್ಜುನ ಮೆಟಗುಡ್ಡ, ಸಿ.ಜಿ.ವಿಭೂತಿಮಠ, ಬಸವರಾಜ ಶಿಂತ್ರಿ, ನಾಗರಾಜ ಬುಡಶೆಟ್ಟಿ ಇತರರಿದ್ದರು.

ಜನರ ಸೇವೆಗೆ ನಮ್ಮ ಕುಟುಂಬ ಸದಾ ಬದ್ಧವಿದೆ. ಮುಂಬರುವ ದಿನಗಳಲ್ಲಿ ಪದ ಬಲವರ್ಧನೆಗೆ ಒತ್ತು ನೀಡುವ ಮೂಲಕ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸೋಣ. ಬೈಲಹೊಂಗಲ ಮಾದರಿ ಮಾಡುವ ಗುರಿ ಹೊಂದಲಾಗಿದೆ. ಶುಭ ಕೋರಿದ ಎಲ್ಲರಿಗೂ ಧನ್ಯವಾದ.

> ಜಗದೀಶ ಮೆಟಗುಡ್ಡ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net