ಹೆರಿಟೇಜ್ ರನ್‌ಗೆ ಜಗದೀಶ ಜೆ.ಸಿ. ಭಾಗಿ

Jagadish J.C. for Heritage Run. Participant
ಜಗದೀಶ
Published on

ವಿಜಯಪುರ : ನಗರದಲ್ಲಿ ನಡೆಯಲಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್ ದಿನಗಣನೆ ಆರಂಭವಾಗುತ್ತಿದ್ದಂತೆ, ಅದರಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸದ್ಯ ಅಂತಾರಾಷ್ಟ್ರೀಯ ಮ್ಯಾರಾಥಾನ್‌ಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೆಸರು ಮಾಡಿರುವ ಜಗದೀಶ ಕೂಡ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಮೈಸೂರು ಮೂಲದ ಜಗದೀಶ, ಜೆ.ಸಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಮೆರಿಕದಲ್ಲಿ ಉನ್ನತ ಮಾಡಿ ಅಲ್ಲಿಯೇ 30 ವರ್ಷಗಳ ಕಾಲ ನೆಲೆಸಿ ನೌಕರಿ ಮಾಡಿದ್ದಾರೆ. 28 ವರ್ಷಗಳ ಕಾಲ ಫೋರ್ಡ್ ಕಂಪನಿಯಲ್ಲಿ ದೀರ್ಘಾವಧಿ ಕಾರ್ಯ ನಿರ್ವಹಿಸುರುವ ಅವರು, ಜಗತ್ತಿನ 193 ರಾಷ್ಟ್ರಗಳ ಪೈಕಿ 159 ರಾಷ್ಟ್ರಗಳನ್ನು ಸುತ್ತಿದ್ದಾರೆ. 55 ನೇ ವಯಸ್ಸಿಗೆ ನಿವೃತ್ತಿ ಹೊಂದಿ ಬಾಕಿ ಉಳಿದ ದೇಶಗಳನ್ನು ಸುತ್ತಾಡಲು ಹೊರಟಿದ್ದಾರೆ. ಭಾರತವನ್ನು ಒಂದು ವರ್ಷ ಕಾಲ ಸುತ್ತಬೇಕು ಎಂಬ ಯೋಚನೆೆ ಹೊಂದಿದ್ದಾರೆ.

2017 ರಿಂದ ಓಡುವ ಹವ್ಯಾಸ ಹೊಂದಿರುವ ಅವರು ವಿಶ್ವದ ಹಲವು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. 25 ಹಾಫ್ ಮತ್ತು 2 ಫುಲ್ ಮ್ಯಾರಾಥಾನ್‌ಗಳಲ್ಲಿ ಪಾಲ್ಗೋಂಡಿರುವ ಅವರು, ಹಾಫ್ ಮ್ಯಾರಾಥಾನ್‌ನ್ನು ಒಂದು ಗಂಟೆ 45 ನಿಮಿಷ ಮತ್ತು ಫುಲ್ ಮ್ಯಾರಾಥಾನ್‌ನನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿರುವ ಸಾಧನೆಗೈದಿದ್ದಾರೆ. ಇತ್ತೀಚೆಗೆ ನಡೆದ ಡೆಟ್ರಾಯಿಟ್ ಹಾಫ್ ಮ್ಯಾರಾಥಾನ್ ನಲ್ಲಿಯೂ ಪಾಲ್ಗೋಂಡು ಗಮನ ಸೆಳೆದಿರುವ ಅವರು, ಈಗ ಹಸಿರು ವಿಜಯಪುರಕ್ಕಾಗಿ ಡಿ. 22 ರಂದು ನಡೆಯಲಿರುವ ವೃಕ್ಷಾತ್ಥಾನ್ ಹೆರಿಟೇಜ್ ರನ್‌ನಲ್ಲಿ 21 ಕಿಮೀ. ಓಟದಲ್ಲಿ ಪಾಲ್ಗೋಳ್ಳಲು ಹೆಸರು ನೋಂದಾಯಿಸುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net