

ಗದಗ: ಬೆಟಗೇರಿಯ ಎಸ್.ಎಸ್.ಕೆ ಶ್ರೀ ಜಗದಂಭಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲೋಕನಾಥ ಬಿ. ಕಬಾಡಿ (ಅಧ್ಯಕ್ಷರು, ಎಸ್.ಎಸ್.ಕೆ ಶಾಲೆ ಹಾಗೂ ಪಂಚಟ್ರಸ್ಟ್ ಕಮೀಟಿ ಬೆಟಗೇರಿ) ಇವರು ವಹಿಸಿಕೊಂಡಿದ್ದರು. ಇವರು ಭಾರತದ ಕೀರ್ತಿ ಮುಗಿಲೆತ್ತರಕ್ಕೆ ಹಾರಲಿ ಎಂದು ಆಶಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಚೇರಮನ್‍ರಾದ ಶ್ರೀ ಜಿ. ವಿ. ಬಸವಾ ಅವರು ವಹಿಸಿಕೊಂಡಿದ್ದರು. ಇವರು ಸ್ವಾತಂತ್ರ್ಯಪ್ರಿಯ ಭಾರತೀಯರೆಂದು ಹೆಮ್ಮೆ ಪಡಬೇಕೆಂದು ತಿಳಿಸಿದರು.
ಅದೇ ರೀತಿ ಸಂಸ್ಥೆಯ ವೈಸ್ ಚೇರಮನ್‍ರಾದ ಶ್ರೀ ದತ್ತು ಯು. ಪವಾರ ಅವರು ಭವ್ಯ ಭಾರತದ ಭವಿಷ್ಯದ ಬಗೆಗೆ ಚಿಂತನೆಯಿರಲಿ ಎಂದು ಮನವರಿಕೆ ಮಾಡಿಕೊಟ್ಟರು. ಹಾಗೆಯೇ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಶ್ರೀ ಗಿರೀಶ ಭೀಮಸೇನಸಾ ಪವಾರ ಭಾಗವಹಿಸಿದ್ದರು. ಪರಿಶ್ರಮದಲ್ಲಿ ಸಾಧನೆ ಇದೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನು ಹೇಳಿದರು ಮತ್ತು ಎಸ್.ಎಸ್.ಕೆ ತರುಣ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಬಿ. ರಾಯಬಾಗಿ ಅವರು ಹಾಗೂ ಶ್ರೀ ಜಗದಂಬಾ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸರೋಜಾ ಎಚ್. ಕಬಾಡಿ ಅವರು ಭಾಗವಹಿಸಿದ್ದರು. ಭಾರತೀಯ ಸೇನೆಯಲ್ಲಿ ಯೋಧರಾದ ಶ್ರೀ ಬಸವರಾಜ ಬೆಣಕಲ್ ಅವರು ವೇದಿಕೆ ಆಗಮಿಸಿ ಶೋಭೆ ತಂದರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಎಸ್ ಡಿ. ಬೆಣಕಲ್ ಹಾಗೂ ಶ್ರೀಮತಿ ಸಿ. ಎಸ್. ಹವಳದ ಅವರು ವೇದಿಕೆಯಲ್ಲಿ ಆಸೀನರಾಗಿದ್ದರು.
78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಾಲೆಯ ವಿಧ್ಯಾರ್ಥಿಗಳು ಹಾಗೂ ಸಹಶಿಕ್ಷಕರು ಭಾಷಣ ಗೈದರು ಹಾಗೂ ಸಾಂಸ್ಕøತಿಕ ಚಟುವಟಿಕೆಯಾಗಿ ನೃತ್ಯ ಪ್ರದರ್ಶನ ಜರುಗಿದವು. ಕಾರ್ಯಕ್ರಮದ ನಿರೂಪಣೆಯನ್ನು ಸಹಶಿಕ್ಷಕಿ ಮಮತಾ ನಡುವಿನಮನಿ ಅವರು ಹಾಗೂ ಸ್ವಾಗತ ಭಾಷಣವನ್ನು ಅಖಿಲಾ ಪಿ. ಚುರ್ಚಪ್ಪನವರ ಹಾಗೂ ಪುಪ್ಪಾರ್ಪಣೆ ಶ್ರೀಮತಿ ಜೆ. ಟಿ. ಭಸ್ಮೆ, ಶಿಕ್ಷಕರ ಭಾಷಣ ಶ್ರೀಮತಿ ಕೆ.ಆರ್. ಕಹಾರ ಮತ್ತು ಎಸ್ ಜಿ. ಪುಟಾನಿಕರ್ ಮತ್ತು ವಂದನಾರ್ಪಣೆಯನ್ನ ಎಮ್ ಎಮ್. ಕೊಪ್ಪಳ ಅವರು ನೇರವೇರಿಸಿದರು ಎಂದು ಪ್ರಕಟಣೆಯ ಮೂಲಕ ಜಾಕೀರಹುಸೇನ ಕೊರ್ಲಹಳ್ಳಿಯವರು ತಿಳಿಸಿರುತ್ತಾರೆ.