ಇಂದಿನಿಂದ ಜಡ್ಕಲ್, ಇಡೂರು ಕುಂಜಾಡಿ ಬಂದ್

lockdown
Published on

ಕುಂದಾಪುರ: ವೈದ್ಯಕೀಯ, ದಿನಪತ್ರಿಕೆ, ಹಾಲು, ಬ್ಯಾಂಕ್ ಸೇವೆ ಹೊರತುಪಡಿಸಿ ಮೇ 27ರಿಂದ ಜೂನ್ 7ರ ತನಕ ಜಡ್ಕಲ್ ಗ್ರಾಮ ಸ್ವಯಂ ಆಗಿ ಲಾಕ್‌ಡೌನ್ ಆಗಲಿದೆ. ಇಡೂರು ಕುಂಜಾಡಿ ಗ್ರಾಪಂ ಕೂಡ ಮೇ 27ರಿಂದ ಜೂ.4ರವರೆಗೆ ಲಾಕ್‌ಡೌನ ಘೋಷಿಸಿದೆ.

ಈ ಪಂಚಾಯಿತಿಗಳಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತಿದೆ. ಸಾರ್ವಜನಿಕರು ಬುಧವಾರ ಮಾತ್ರ ರೇಶನ್ ಇನ್ನಿತರ ವಸ್ತುಗಳ ಪಡೆಯಲು ಅವಕಾಶವಿದೆ. ಹಾಲು ಮಾರಾಟ ಕೇಂದ್ರಗಳು ಬೆಳಗ್ಗೆ 8.30ರವರೆಗೆ ಕಾರ್ಯ ನಿರ್ವಹಿಸಲಿವೆ. ಜಡ್ಕಲ್‌ನಲ್ಲಿ ಜೂ.7ರ ತನಕ ಎಲ್ಲ ವಾಣಿಜ್ಯ ವ್ಯವಹಾರ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಆರೋಗ್ಯ ಸೇವೆಗೆ ಹೊರತು ಮನೆಯಿಂದ ಹೊರಬರಬಾರದು. ತುರ್ತು ಸೇವೆಗೆ ಸ್ಥಳೀಯ ಗ್ರಾಪಂ ಸದಸ್ಯರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net