

ಕುಂದಾಪುರ: ಜಾಡಿಹಟ್ಟಿಯಂಗಡಿ ಕ್ರಾಸ್ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಿಲಾಗಿದ್ದರೂ ಈ ರಸ್ತೆಯಲ್ಲಿ ನಿರ್ಮಿಸಿರುವ ಕಿರು ಸೇತುವೆ ಅವೈಜ್ಞಾನಿಕವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ಎರಡೂ ಕಡೆ ತಗ್ಗು ಪ್ರದೇಶವಿದ್ದು, ವಾಹನ, ಜನ ಸಂಚಾರದ ಸುರಕ್ಷತೆಗೆ ಗಾರ್ಡ್ ನಿರ್ವಾಣ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ.
ಕುಂದಾಪುರದಿಂದ ಬಾಳೆಕೆರೆ, ವಂಡ್ಸೆ, ಚಿತ್ತೂರು, ಕೊಲ್ಲೂರು ಮೊದಲಾದ ಕಡೆ ಹೋಗುವವರು ಜಾಡಿಹಟ್ಟಿಯಂಗಡಿ ಕ್ರಾಸ್ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ರಸ್ತೆ ನಿರ್ವಾಣಗೊಂಡು ಸಾಕಷ್ಟು ವರ್ಷಗಳಾಗಿದ್ದರೂ ದುರಸ್ತಿಯಾಗದೆ ಈ ರಸ್ತೆಯಲ್ಲಿ ಸಂಚಾರ ಕಡಿಮೆ ಇತ್ತು. ಇತ್ತೀಚೆಗೆ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗಿದೆ. ಆದರೆ ಈ ರಸ್ತೆಗೆ ನಿರ್ಮಿಸಿರುವ ಕಿರುಸೇತೆವಯ ಇಕ್ಕೆಲಗಳಲ್ಲಿ ಯಾವುದೇ ಗಾರ್ಡ್ ನಿರ್ಮಾಣ ಮಾಡದಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಳೆಗಾಲದಲ್ಲಿ ನೀರು ತುಂಬಿ ಸೇತುವೆ ಮೇಲೇ ಹರಿಯುವುದರಿಂದ ರಸ್ತೆ ಯಾವುದು ಸೇತುವೆ ಯಾವುದೆಂದು ತಿಳಿಯದೆ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಆಧುನಿಕ ವಾದರಿಯ ಗಾರ್ಡ್‌ನ ಬೇಲಿ ಅಳವಡಿಕೆ ಮತ್ತು ಸೂಚನಾ ಲಕ ಅಳವಡಿಸುವ ಕಾರ್ಯ ಆಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜಾಡಿಹಟ್ಟಿಯಂಗಡಿ ಕ್ರಾಸ್ ರಸ್ತೆಯಲ್ಲಿನ ಸೇತುವೆಯ ತಿರುವಿನಲ್ಲಿ ಆಧುನಿಕ ವಾದರಿಯ ಗಾರ್ಡ್ ಬೇಲಿ ನಿರ್ಮಿಸಬೇಕು. ರಸ್ತೆಯ ವಿವಿಧೆಡೆ ಸೂಚನಾಫಲಕ ಅಳವಡಿಸಬೇಕು. ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ಎರಡು ತಗ್ಗು ಪ್ರದೇಶಗಳಲ್ಲಿ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಬೇಕು. -ನಾಗರಾಜ್, ಸ್ಥಳೀಯ ನಿವಾಸಿ https://www.vijayavani.net/special-article-on-medical-representatives-day-august-1st https://www.vijayavani.net/life-experience-lies-hidden-in-folk-literature