ಸೂಕ್ತ ಮಾರುಕಟ್ಟೆಯಿಂದ ಕೃಷಿಕರಿಗೆ ಲಾಭ: ಶಶಿಕುಮಾರ್ ಅಭಿಪ್ರಾಯ

mela
ಹಲಸು ಹಬ್ಬಕ್ಕೆ ದ.ಕ. ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಚಾಲನೆ ನೀಡಿದರು. ಪ್ರಶಾಂತ್ ಕುಮಾರ್ ರೈ, ರತ್ನ ಚಿತ್ತರಂಜನ್ ಬೋಳಾರ್ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಪ್ರತಿಯೊಬ್ಬನೂ ಬೆಳೆಯುವ ಹಲಸಿನ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ದೊರೆತಾಗ ಹಲಸು ಬೆಳೆಗಾರರಿಗೆ ಆರ್ಥಿಕ ಲಾಭ ದೊರೆಯುತ್ತದೆ ಎಂದು ದ.ಕ.ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು.

ಜೇಸಿಐ ಉಪ್ಪಿನಂಗಡಿ ಚಾರಿಟೆಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಪ್ಪಿನಂಗಡಿಯ ಎಚ್.ಎಂ.ಆಡಿಟೋರಿಯಂನಲ್ಲಿ ಎರಡು ದಿನಗಳ ಹಲಸು ಹಬ್ಬ-24ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಮಾರಾಟ ಮಳಿಗೆಗೆ ಕೆ. ರಾಧಾಕೃಷ್ಣ ನಾಯ್ಕ್ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಜೇಸಿಐ ಉಪ್ಪಿನಂಗಡಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ, ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಶ್ಮಿ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರಾಗ್ಸ್, ಪೋಟೋಗ್ರಾಫರ್ಸ್‌ ಅಸೋಸಿಯೇಷನ್‌ನ ಪುತ್ತೂರು ವಲಯಾಧ್ಯಕ್ಷ ರಘು ಶೆಟ್ಟಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಂಯೋಜಿಯಕಿಯರಾದ ಸುಮಿತ್ರಾ, ಭಾರತಿ, ಉಪ್ಪಿನಂಗಡಿ ಜೇಸಿಐ ಅಧ್ಯಕ್ಷೆ ಲವೀನಾ ಪಿಂಟೋ, ಕಾರ್ಯದರ್ಶಿ ಸುರೇಶ್, ಗೆಳೆಯರು 94 ಉಪ್ಪಿನಂಗಡಿ ಇದರ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಉಪಸ್ಥಿತರಿದ್ದರು.

ಕೃಷಿಕರಿಗೆ ಸನ್ಮಾನ

ಕೃಷಿಕ ನೇಮಣ್ಣ ಪೂಜಾರಿ ಪಾಲೇರಿ, ಸಿದ್ದಪ್ಪ ನಾಯ್ಕ, ಧರ್ನಪ್ಪ ಗೌಡ ಅಂಡಿಲ, ಕೆ.ಪಿ. ಜಯರಾಮ ಶೆಟ್ಟಿ, ಪ್ರತಾಪ್ ಪೆರಿಯಡ್ಕ, ಪದ್ಮ ಶೆಟ್ಟಿ ಅಡೆಕ್ಕಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net