ಚಿರತೆ ದಾಳಿಗೆ ನರಿ ಬಲಿ

Sasvehalli, Cheetah, Pratyaksha,
Published on

ಸಾಸ್ವೆಹಳ್ಳಿ: ಹೋಬಳಿಯ ರಾಂಪುರ ಗ್ರಾಮದ ಹಿಂದು ರುದ್ರಭೂಮಿಯ ಸಮೀಪ ಗೋಮಾಳ ಜಮೀನಿಗೆ ಹೋಗುವ ದಾರಿಯಲ್ಲಿ ಸೋಮವಾರ ರಾತ್ರಿ ಚಿರತೆ ನರಿಯೊಂದನ್ನು ಕೊಂದು ಹಾಕಿದೆ.

ಕಳೆದ ತಿಂಗಳು ಇದೇ ಸ್ಥಳದಲ್ಲಿ ಕುರಿಗಾಹಿಗಳ ಮೇಕೆ ಮತ್ತು ಕುರಿಯನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ನಂತರ ಚಿರತೆ ಬೇರೆಡೆಗೆ ಹೋಗಿರಬಹುದು ಎಂದು ಗ್ರಾಮಸ್ಥರು ಭಾವಿಸಿದ್ದರು. ಇದೀಗ ನರಿ ಮೇಲಿನ ಚಿರತೆ ದಾಳಿ ಘಟನೆ ಮತ್ತೆ ಸ್ಥಳೀಯರಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ.

ಮತ್ತೊಂದೆಡೆ ಹೋಬಳಿಯ ಬಾಗೇವಾಡಿ ಗ್ರಾಮದಲ್ಲಿ ರಾತ್ರಿ ವೇಳೆ ಕರಡಿ ಪ್ರತ್ಯಕ್ಷವಾಗಿರುವುದು, ಗ್ರಾಮದ ಬೀದಿಗಳಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆ ಆಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net