ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯತ್ನಿಸಿ, ಪ್ರೊ. ಟಿ.ಎಂ. ಅಮ್ಮಿನಬಾವಿ ಸಲಹೆ, ಜಾಬಿನ್ ಕಾಲೇಜಿನಲ್ಲಿ ಪದವಿ ಪ್ರದಾನ

IMG_20240914_211808_66-1.jpg
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ಸಮಾಜಕ್ಕೆ ನಿಷ್ಠರಾಗಿ ಕಾರ್ಯ ಮಾಡಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಪ್ರಕೃತಿಯ ಮೂಲಕ ಪರಿಹಾರಗಳನ್ನು ಕಂಡು ಹಿಡಿಯುವ ಪ್ರಯತ್ನ ಮಾಡಬೇಕು ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಶಕ್ತಿ ಮತ್ತು ಪರಿಸರ ವಿಭಾಗ ನಿರ್ದೇಶಕ ಪ್ರೊ. ಟಿ.ಎಂ. ಅಮ್ಮಿನಭಾವಿ ಹೇಳಿದರು.

ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ (ಸ್ವಾಯತ್ತ) ಶನಿವಾರ ಏರ್ಪಡಿಸಿದ್ದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಸಾಮಾನ್ಯ ವಿಜ್ಞಾನವನ್ನು ಜೀವನ ವಿಜ್ಞಾನಕ್ಕೆ ಅಳವಡಿಸಿಕೊಳ್ಳಲು ಸಲಹೆ ನೀಡಿದ ಅವರು, ಇಂದು ಹೊಸ ರೋಗಗಳು ಎಲ್ಲೆಡೆ ಕಾಲಿಡುತ್ತಿದ್ದು ಅವುಗಳ ನಿವಾರಣೆಗೆ ಪ್ರಕೃತಿಯಲ್ಲಿ ಉತ್ತರಗಳಿದ್ದು ಅವುಗಳನ್ನು ಸಮಾಜಕ್ಕೆ ಸಂಶೋಧನೆಗಳ ಮೂಲಕ ಮುಟ್ಟಿಸಬೇಕೆಂದರು.

ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ವಿದ್ಯಾರ್ಥಿಗಳು, ಪಾಲಕರು, ಶಿಕರು ಮತ್ತು ಸಮಾಜಕ್ಕೆ ಗೌರವ ತರುವ ಕಾರ್ಯಗಳನ್ನು ಮಾಡಬೇಕು. ಆತ್ಮ ವಿಶ್ವಾಸದಿಂದ ಜೀವನದಲ್ಲಿ ಸಲರಾಗಬೇಕು. ದೇಶಭಕ್ತಿ ಬೆಳೆಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಬೇಕಾಗುವ ವ್ಯಕ್ತಿಗಳಾಗಬೇಕೆಂದರು.

ಕರ್ನಾಟಕ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ, ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ. ಸುರೇಶ ತುವಾರ, ಶೈಣಿಕ ತ ಪ್ರೊ. ಎಸ್.ಎಸ್. ಬೆಂಚಳ್ಳಿ ಅತಿಥಿಗಳಾಗಿದ್ದರು.

ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಸ್ವಾಗತಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಮಹಾಂತೇಶ ಎಂ. ಪರೀಕ್ಷೆ ವರದಿ ವಾಚನ ಮಾಡಿದರು.

ಉಪನ್ಯಾಸಕಿ ಡಾ. ಸ್ನೇಹಾ ಚಿಂತಾ ಮತ್ತು ಸುನೇನಾ ಎಂ.ಎಂ. ಕಾರ್ಯಕ್ರಮ ನಿರೂಪಿಸಿದರು. ಮೇಘಾ ದೇಶಪಾಂಡೆ ಪದವಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು.

ಸ್ವಾಯತ್ವ ಮಹಾವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯರು, ಡೀನರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

2020&21ರ ಬಿ.ಎಸ್ಸಿಯ 397, ಬಿಸಿಎ ದಲ್ಲಿ 159, ಎಂ.ಎಸ್ಸಿ 45 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

ಪಾಲಕರು ಸಹ ತಮ್ಮ ಮಕ್ಕಳೊಂದಿಗೆ ಇದ್ದು ಸಂತಸ ಹಂಚಿಕೊಂಡರು. ಬಿಎಸ್ಸಿಯಲ್ಲಿ ಶ್ರೇಯಾ ಬಿ. ಶೆಟ್ಟಿ, ಬಿಸಿಎ ದಲ್ಲಿ ಸಂಜನಾ ಪವಾರ, ಎಂ.ಎಸ್.ಸಿ. ಉಜಮಾ ಮೀರ್ ರೈಲ್, ವಿಜಯಲಕ್ಷ್ಮಿ ಹಿರೇಮಠ, ಸೋಫಿಯಾ ಮಿಸ್ಕಿನ್, ಹರ್ಷಿತಾ ಓಲಿ, ಬಂಗಾರದ ಪದಕಗಳನ್ನು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net