ಬಿಡನಾಳ ಜಾತ್ರಾ ಮಹೋತ್ಸವ ಏ.16 ರಿಂದ

bidnal temple
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಿಡನಾಳ ಶ್ರೀ ಹನುಮಂತ(ಮಾರುತಿ)ದೇವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಏ.16 ರಿಂದ 24ರವರೆಗೆ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

16ರಿಂದ 22ರವರೆಗೆ ನಿತ್ಯ ಸಂಜೆ 7ಗಂಟೆಗೆ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಾಲನಿಯಲ್ಲಿ ಮಣಕವಾಡ ಅನ್ನದಾನೇಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಅವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.

19ರಂದು ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದೇವತೆ ಶ್ರೀ ಮರಗಮ್ಮ ದೇವಿಗೆ ಉಡಿ ತುಂಬುವ, ಶಾಂತಿ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯಲಿವೆ. 22ರಂದು ಸಂಜೆ 7 ಗಂಟೆಗೆ ಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ. 23ರಂದು ಬ್ರಾಹ್ಮಿ ಮುಹೂರ್ತದಲ್ಲಿ ಹನುಮಂತ ದೇವರ ತೊಟ್ಟಿಲೋತ್ಸವ, ನಂತರ ಹೋಮ ಹಾಗೂ ಸಂಜೆ 5.15 ಗಂಟೆಗೆ ಹನುಮಂತ ದೇವರ ರಥೋತ್ಸವ ನಡೆಯಲಿದೆ. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ವಹಿಸಲಿದ್ದಾರೆ. 24ರಂದು ಬೆಳಗ್ಗೆ 11ಗಂಟೆಗೆ ಮಹಿಳೆಯರು ವಿಶೇಷ ರಥೋತ್ಸವಕ್ಕೆ ಚಾಲನೆ ನೀಡುವರು.

ಮೂರುಸಾವಿರ ಮಠದ ಶ್ರೀ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಧ್ಯಾಹ್ನ 12.30 ಕ್ಕೆ ಮಹಾಪ್ರಸಾದ ಮೂಲಕ ಜಾತ್ರಾ ಮಹೋತ್ಸವ ಮಂಗಲವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net