ಗ್ಲೋಬಲ್ ಫೌಂಡೇಷನ್ ನಿಂದ ವೃಕ್ಷಾರೋಪಣ

IMG_20250909_203255_340.jpg
Published on

ಹುಬ್ಬಳ್ಳಿ: ಇಲ್ಲಿಯ ಇನ್ಫೋಸಿಸ್ ಸಿಎಸ್ಆರ್, ಕನೆಕ್ಟ್ ಫಾರ್ ಮತ್ತು ಜೆ.ಎಸ್. ಗ್ಲೋಬಲ್ ಫೌಂಡೇಷನ್ ಆಶ್ರಯದಲ್ಲಿ ನಗರದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಏರ್ಪಡಿಸಲಾಯಿತು.

ಗೋಕುಲದ ಎಸ್.ಆರ್. ಬೊಮ್ಮಾಯಿ ಪ್ರೌಢಶಾಲೆ, ನಗರದ ಸ್ವತಂತ್ರ ಪದವಿಪೂರ್ವ ಕಾಲೇಜು ಸೇರಿ ವಿವಿಧೆಡೆ ಸಸಿಗಳನ್ನು ನೆಡಲಾಯಿತು.

ಜೆ.ಎಸ್. ಗ್ಲೋಬಲ್ ಫೌಂಡೇಷನ್ ಸ್ಥಾಪಕ ಜಿಶಾನ್ ಸಿರಸಂಗಿ ಮಾತನಾಡಿ, ಉಚಿತ ಸಸಿಗಳನ್ನು ಫೌಂಡೇಷನ್ ವತಿಯಿಂದ ಒದಗಿಸಲಾಗಿದ್ದು, ಮುಂದಿನ ಪೀಳಿಗೆಗೆ ಶುದ್ಧ ವಾತಾವರಣ ಉಳಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ಮೂರು ವರ್ಷದಲ್ಲಿ 10 ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಇನ್ಫೋಸಿಸ್ ನ ಶಿವಾನಂದ ಕುಡ್ಲಮಠ, ಫೌಂಡೇಷನ್‌ ನ ಅಲ್ಲಾಭಕ್ಷ ಮಹ್ಮದ ಅಲಿ ಅಸದುಲ್ಲಾ, ನವೀನ್ ನೇಸರಗಿ, ಮಾರಿಯಾ, ಹೀನಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net