

ಚನ್ನಗಿರಿ: ಕನ್ನಡ ನಾಡು-ನುಡಿಗೆ ಅಪಾರವಾದ ಸೇವೆ ಸಲ್ಲಿಸಿ ಹಾಗೂ ಸಮಾಜವಾದ ನಾಯಕತ್ವಕ್ಕೆ ಹೆಸರು ತಂದ ಧೀಮಂತ ನಾಯಕ ಜೆ.ಎಚ್. ಪಟೇಲ್ ಎಂದು ಹರಿಹರ ಪಂಚಮಸಾಲಿ ಮಠದ ದಾಸೋಹ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಬಣ್ಣಿಸಿದರು.
ತಾಲೂಕಿನ ಸಾಸಲು ರಸ್ತೆಯ ಪಂಚಮಸಾಲಿ ನಿಲಯದಲ್ಲಿ ಗ್ರಾಮದ ಪಂಚಮಸಾಲಿ ಸಮುದಾಯ ಘಟಕದಿಂದ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 93ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಪಟೇಲರು ತಮ್ಮ ಆಡಳಿತ ಅವಧಿಯಲ್ಲಿ ನೀಡಿದ ಶಾಶ್ವತ ಯೋಜನೆಗಳು ಇಂದಿಗೂ ಜನೋಪಯೋಗಿಯಾಗಿವೆ. ಸಮಾಜವಾದದ ತತ್ವದಡಿ ಸರ್ವರಿಗೂ ಸಮಬಾಳು ಎನ್ನುವ ಭಾವನೆ ಅವರದ್ದಾಗಿತ್ತು. ಅವರ ಹಾಸ್ಯದ ಮಾತುಗಳು ಇಂದಿಗೂ ಮನಸ್ಸನ್ನು ಪ್ರಪುಲ್ಲಗೊಳಿಸುತ್ತವೆ. ನಾಡು ಕಂಡ ಧೀಮಂತ ನಾಯಕರಲ್ಲಿ ಮೊದಲಿಗರಾಗಿ ಪಟೇಲ್ ನಿಲ್ಲುತ್ತಾರೆ ಎಂದರು.
ಪರ್ತಕರ್ತ ಎಸ್.ಜೆ. ಕಿರಣ್ ಮಾತನಾಡಿದರು. ಘಟಕದ ಗೌರವಾಧ್ಯಕ್ಷ ಪಿ. ಚಂದ್ರಪ್ಪ, ಅಧ್ಯಕ್ಷ ಜಯಪ್ಪ, ಮಠದ ದಾಸೋಹಿ ಸಮಿತಿ ಶಿವಾನಂದಪ್ಪ, ಬಾತಿ ರವಿಕುಮಾರ್, ಸಾಸಲು ಹಾಲೇಶಪ್ಪ, ಶಿವಣ್ಣ, ಜಗದೀಶ್, ವೀರೇಂದ್ರ ಪಾಟೀಲ್, ಕೊಬ್ಬರಿ ವೀರಭದ್ರಪ್ಪ, ವೀರೇಶ್ ತಣಿಗೆರೆ, ಎಸ್.ಪಿ. ಮಂಜು ಇದ್ದರು.