

ಬೆಂಗಳೂರು: ಇಂಡಿಯನ್ ಯೋಗ ಅಸೋಸಿಯೇಷನ್ (ಐವೈಎ) ವತಿಯಿಂದ ಕೊಯಮತ್ತೂರಿನಲ್ಲಿನ ಈಶ ಯೋಗ ಕೇಂದ್ರದಲ್ಲಿ 2ನೇ ಆಡಳಿತ ಮಂಡಳಿ ಸಭೆ ನಡೆಯಿತು.
ಕೊಯಮತ್ತೂರು ಹೊರವಲಯದ ವೆಳ್ಳಿಯಂಗಿರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಯೋಗ ಕೇಂದ್ರಕ್ಕೆ ಐವೈಎ ಅಧ್ಯಕ್ಷ ಬಾಬಾ ರಾಮದೇವ್ ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರನ್ನು ಸದ್ಗುರು ಆದರದಿಂದ ಬರಮಾಡಿಕೊಂಡರು.
ಮಾನವ ಕಲ್ಯಾಣವನ್ನು ವರ್ಧಿಸಲು ಧಾರ್ವಿುಕೇತರ ಮತ್ತು ವೈಜ್ಞಾನಿಕ ಸಾಧನವಾಗಿ ಯೋಗವನ್ನು ಪ್ರಚುರಪಡಿಸುತ್ತಿರುವ ವಿವಿಧ ಸಂಘ- ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಯೋಗವನ್ನು ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪಿಸಲು ಅನುಸರಿಸಬೇಕಾದ ವಿಧಾನಗಳು, ಸರ್ಕಾರದ ಬೆಂಬಲ ಮತ್ತು ಯೋಗವನ್ನು ಕ್ರೀಡೆಯಾಗಿ ಉತ್ತೇಜಿಸುವ ಬಗ್ಗೆಯೂ ರ್ಚಚಿಸಲಾಯಿತು.
ಎಸ್ವ್ಯಾಸ ಯೋಗ ವಿವಿ ಕುಲಪತಿ ಡಾ. ಎಚ್.ಆರ್. ನಾಗೇಂದ್ರ, ಪರಮಾರ್ಥ ನಿಕೇತನದ ಅಧ್ಯಕ್ಷ ಚಿದಾನಂದ ಸರಸ್ವತಿ ಮತ್ತಿತರರು ಉಪಸ್ಥಿತರರಿದ್ದರು. ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ವಿಡಿಯೋ ಕಾನ್ಪರೆನ್ಸ್ ಮೂಲಕ ಅಭಿಪ್ರಾಯ ಮಂಡಿಸಿದರು.