ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

16 HANUR 1
Published on

ಹನೂರು : ತಾಲೂಕಿನ ಕೌದಳ್ಳಿ ಗ್ರಾಮದ ಬಳಿ ಆನೆ ದಂತ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ನಾಮಕಲ್ ಜಿಲ್ಲೆ ತಿರುಂಚಗೋಡು ಮಲ್ಲಸಮುದ್ರಂನ ಶಕ್ತಿವೇಲ್ ಹಾಗೂ ಹನೂರಿನ ನಾಗೇಂದ್ರಬಾಬು ಬಂಧಿತ ಆರೋಪಿಗಳು.

ಇವರಿಬ್ಬರೂ ಬುಧವಾರ ಬೆಳಗ್ಗೆ ಚೀಲದಲ್ಲಿ ಆನೆ ದಂತ ಹಾಕಿಕೊಂಡು ಬೈಕ್‌ನಲ್ಲಿ ಮಲೆಮಹದೇಶ್ವರ ಬೆಟ್ಟದ ಕಡೆಯಿಂದ ಹನೂರಿಗೆ ತೆರಳುತ್ತಿದ್ದರು. ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಆನೆ ದಂತ ಸಮೇತ ಆರೋಪಿಗಳು ಸಿಕ್ಕಿಬಿದ್ದರು. 1 ಅಡಿ ಉದ್ದದ (2 ಲಕ್ಷ ರೂ. ಮೌಲ್ಯದ) ದಂತ, ಬೈಕ್ ಸಮೇತ ಆರೋಪಿಗಳನ್ನು ಬಂಧಿಸಲಾಯಿತು. ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ಗಿರೀಶ್, ಲಿಯಾಖತ್ ಆಲಿಖಾನ್, ಪರಶುರಾಮ್ ಹಾಗೂ ಮುಕಂದರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net