

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಐವಿಎಫ್ ದಿನ ನಮಿತ್ತ ನಗರದ ಮಾಳಮಡ್ಡಿಯ ಪ್ರಶಾಂತ ಆಸ್ಪತ್ರೆಯಲ್ಲಿ ಜು. 25ರಂದು ವಿಶೇಷ ಕಾರ್ಯಕ್ರಮ ಹಾಗೂ ಜು. 29ರಿಂದ ಆ. 2ರವರೆಗೆ ಮಕ್ಕಳಿಲ್ಲದವರಿಗೆ ಉಚಿತ ಪರೀಕ್ಷೆ ಮತ್ತು ಐವಿಎಫ್ ಚಿಕಿತ್ಸೆ ನೀಡಲಾಗುವುದು ಎಂದು ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವಿಎಫ್ ಎನ್ನುವುದು ಮಹಿಳೆಯರಿಗೆ ಮಕ್ಕಳನ್ನು ಪಡೆಯಲು ಒಂದು ವರದಾನ. ಜು. 25ರಂದು ಐವಿಎಫ್ ದಿನ ಆಚರಿಸುತ್ತಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು, ಡಿಎಚ್ಒ ಡಾ. ಶಶಿ ಪಾಟೀಲ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಏರ್ಪಡಿಸಿರುವ ಮಾತೃತ್ವದ ಬಗ್ಗೆ ಲೇಖನ ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ. ಜತೆಗೆ ಐವಿಎಫ್ ದಂಪತಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಐವಿಎಫ್ ಚಿಕಿತ್ಸೆಯ ನುರಿತ ವೈದ್ಯಾಧಿಕಾರಿ ಡಾ. ಕೋಮಲ್ ರೇವಣಕರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚಿದೆ. ಪ್ರತಿ ಮಹಿಳೆಗೆ ಮಾತೃತ್ವದ ಹಕ್ಕು ಇರುತ್ತದೆ. ಅಂತವರಿಗೆ ಸರಿಯಾದ ಮಾರ್ಗದರ್ಶನ ಇರುವುದಿಲ್ಲ. ಅನೇಕರಿಗೆ ಐವಿಎಫ್ನಿಂದ ಮಕ್ಕಳಾಗಿ ಪಾಲಕರ ಕನಸು ನೇರವೇರಿಸಲು ಸಾಧ್ಯವಾಗಿದೆ. ಸುಮಾರು 40 ವರ್ಷದಿಂದ 8 ಮಿಲಿಯನ್ಗೂ ಹೆಚ್ಚು ಮಕ್ಕಳು ಐವಿಎಫ್ ಚಿಕಿತ್ಸೆಯಿಂದ ಜನಿಸಿದ್ದಾರೆ. ವರ್ಷಕ್ಕೆ 5 ಮಿಲಿಯನ್ಗೂ ಅಧಿಕ ಹೆಚ್ಚು ಐವಿಎಫ್ ಮಕ್ಕಳು ಜನಿಸುತ್ತಾರೆ ಎಂದರು.
ಯಶೋಧಾ ಅಂಗಡಿ, ಇತರರು ಇದ್ದರು.