ಹಲ್ಲೆಗೊಳಗಾದ ಮಹಿಳೆಗೆ ರಕ್ಷಣೆ, ನ್ಯಾಯ ಕೊಡಿ

hadapada
Published on

ಹುಬ್ಬಳ್ಳಿ: ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಮಹಿಳೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘವು ಹು-ಧಾ ಪೊಲೀಸ್ ಆಯುಕ್ತರು ಹಾಗೂ ಮಹೌಪರರನ್ನು ಆಗ್ರಹಿಸಿದೆ.
ನಮ್ಮ ಸಮಾಜದ ನೀಲಾ ಹಂಪಣ್ಣವರ ಮೇಲೆ ಮಹೇಶ ಮೇಟಿ ಎಂಬಾತ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಐವರು ಹೆಣ್ಣುಮಕ್ಕಳೊಂದಿಗೆ ಬಡತನದಲ್ಲಿರುವ ನೀಲಾ ಹಂಪಣ್ಣವರ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದು ಸ್ವಾಗತಾರ್ಹ. ಆಘಾತಕ್ಕೊಳಗಾಗಿರುವ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಮತ್ತು ಆರ್ಥಿಕ ನೆರವು ನೀಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ, ಜಿಲ್ಲಾಧ್ಯಕ್ಷ ಈರಣ್ಣ ಚಿಕ್ಕಬೆಳ್ಳಿಕಟ್ಟಿ, ಮುಖಂಡರಾದ ಮಹಾರುದ್ರಪ್ಪ ಪಡೇಸೂರ, ನಿಂಗರಾಜ ಹಡಪದ, ಮಲ್ಲಿಕಾರ್ಜುನ ಹಡಪದ, ಫಕೀರೇಶ ಹಡಪದ, ಸಂಗಮೇಶ ಬೂದಿಹಾಳ, ಮಾರುತಿ ಹಡಪದ, ಈರಣ್ಣ ಹಡಪದ, ಶಿವಾನಂದ ಹಡಪದ, ಯಲ್ಲಪ್ಪ ಗೊಬ್ಬರಗುಂಪಿ, ಬಸವರಾಜ ಹಡಪದ, ಶಂಕರ ಹಡಪದ, ಶಾಂತಕ್ಕ ಹಡಪದ, ಪ್ರಕಾಶ ಹೊಸಮನಿ, ಅಶೋಕ ಹಡಪದ, ಮಹೇಶ ಹಡಪದ, ಉಮೇಶ ಹೊಸಮನಿ ಇತರರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net