

ಗೊಳಸಂಗಿ: ಪರಿಸರದ ಸಂರಣೆ ಮಾಡುವಲ್ಲಿ ರ್ನಿಲಕ್ಷ ತಾಳಿದರೆ ಭವಿಷ್ಯದಲ್ಲಿ ನಾವು ಗಾಳಿಯನ್ನು ಕೂಡ ದುಡ್ಡು ಕೊಟ್ಟು ಖರೀದಿಸುವ ಕಾಲ ಬಂದೀತು ಜೋಕೆ ಎಂದು ಬಸವನಬಾಗೇವಾಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಹೇಳಿದರು.
ಸಮೀಪದ ಮುತ್ತಗಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಅಮೃತ ಸರೋವರ ಕಾಮಗಾರಿ ನಿರ್ಮಾಣದಡಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಿಡಿಒ ಬಿ.ಎಸ್.ಬಡಿಗೇರ ಮಾತನಾಡಿ, ಪರಿಸರ ದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮ ಆಗಬಾರದು. ಪರಿಸರ ಸಂರಣೆ ನಮ್ಮ ಉಸಿರಾಗಬೇಕು. ಉಸಿರಾಟಕ್ಕೆ ಪರಿಸರ ಬೇಕೇಬೇಕು ಎಂದರು.
ಗ್ರಾಪಂ ಅಧ್ಯೆ ನೀಲಾ ಪಾಟೀಲ ಅಧ್ಯತೆ ವಹಿಸಿ ಮಾತನಾಡಿದರು. ಉಪಾಧ್ಯೆ ಕವಿತಾ ಬಡಿಗೇರ, ಗ್ರಾಪಂ ಸದಸ್ಯರು, ಗ್ರಾಪಂ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಇದ್ದರು.