ತುಂಬಾ ದುಃಖ, ನೋವುಂಟು ಮಾಡಿದೆ

pratham
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾಳ ಹತ್ಯೆ ನನಗೆ ತುಂಬಾ ನೋವುಂಟು ಮಾಡಿದೆ. ನಾನು ಬಹಳ ದುಃಖದಿಂದ ಇಲ್ಲಿಗೆ ಬಂದಿದ್ದೇನೆ ಎಂದು ನಟ ಪ್ರಥಮ್ ಹೇಳಿದರು.

ಬಿಡನಾಳದಲ್ಲಿರುವ ನೇಹಾಳ ಮನೆಗೆ ಭಾನುವಾರ ಭೇಟಿ ನೀಡಿದ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮುಂದಿನ ವಾರ ನನ್ನ ಚಿತ್ರದ ಪ್ರಚಾರಕ್ಕೆ ಹುಬ್ಬಳ್ಳಿಗೆ ಬರುವವನಿದ್ದೇನೆ. ಆದರೆ, ಇದೀಗ ಮುಂಚಿತವಾಗಿ ಸಾವಿನ ಮನೆಗೆ ಬರುವಂತಾಗಿದ್ದು, ನನ್ನ ದುರ್ದೈವ ಎಂದರು.

ಮುಸ್ಲಿಮ್ ಹುಡುಗರು ಹಿಂದು ಹುಡುಗಿಯರನ್ನು ಯಾಕೆ ಲವ್ ಮಾಡಬೇಕು. ನೀವು (ಮುಸ್ಲಿಮ್ ಹಿಂದು ಹುಡುಗಿಯರನ್ನು ಲವ್ ಮಾಡಿ ಏನು ಮಾಡುತ್ತೀರಿ ? ಹಿಂದು ಹುಡುಗಿಯರ ಜತೆ ನಿಮಗೆ ಏನು ಕೆಲಸ? ನಾನು ಈ ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಮುಸ್ಲಿಮ್ ಯುವಕರು, ಬೇಕಾದರೆ 3-4 ಮುಸ್ಲಿಮ್ ಹುಡುಗಿಯರನ್ನು ಲವ್ ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.

ಓಲೈಕೆ ರಾಜಕಾರಣ ಬೇಡ

ಈ ಪ್ರಕರಣದಲ್ಲಿ ಯಾವ ಪಕ್ಷದವರು ರಾಜಕಾರಣ ಮಾಡಬಾರದು. ರಾಜಕೀಯ ತಪ್ಪಲ್ಲ. ಇಲ್ಲಿ ಮಕ್ಕಳ ಪ್ರಾಣ ಹೋಗುತ್ತಿದೆ. ಯಾರೂ ಕೂಡ ಓಲೈಕೆ ರಾಜಕಾರಣ ಮಾಡವುದು ಬೇಡ. ಇಂಥ ಪಕ್ಷವೆಂದು ಹೆಸರು ಹೇಳುವುದಿಲ್ಲ. ನಮ್ಮ ದೇಶದಲ್ಲಿ ಮೊಗಲರು, ಬ್ರಿಟಿಷರು ಕಾಲದಲ್ಲೂ ದೌರ್ಜನ್ಯಗಳಾಗಿವೆ. ಆದರೆ, ಇಂದು ರಾಜಕೀಯ ಹೇಳಿಕೆ ಭಯ ಹುಟ್ಟಿಸುತ್ತಿದೆ. ಉಸಿರು ಕಟ್ಟುವಂಥ ವಾತಾವರಣ ನಿರ್ಮಾಣ ಆಗಬಾರದು ಎಂದರು.

ನಮ್ಮ ದೇಶದಲ್ಲಿ ಸುಂದರವಾದ ದೇಶ. ಇಲ್ಲಿ ಹಿಂದುಗಳನ್ನು ಬದುಕಲು ಬಿಡಿ. ಅವರು ಬದುಕಲಿ. ನಾವು ಅವರನ್ನು ದ್ವೇಷಿಸುತ್ತಿಲ್ಲ. ಓಲೈಕೈ ಮಾಡುವುದು ಬಿಡಿ ಎಂದು ಯಾವುದೇ ಪಕ್ಷದ ಹೆಸರು ಹೇಳದೇ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net