ಹೊಗಳದಿದ್ದರೂ ಸರಿ, ತೇಜೋವಧೆ ಮಾಡ್ಬೇಡಿ

ಹಂಚೀಪುರ ಬಳಿಯ ಗೃಹಕಚೇರಿಯಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್‌ರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್, ಕಸಬಾ ಅಧ್ಯಕ್ಷ ರಮೇಶ್, ಭವಾನಿಶಂಕರ್ ಬೈರೇಗೌಡ್ರು, ನಗರಸಭೆ ಸದಸ್ಯೆ ಪುಷ್ಪಲತಾ ಮಾರೇಗೌಡ, ವಕೀಲ ಕನಕರಾಜು, ಮುಖಂಡ ದೇವನಹಳ್ಳಿ ಸುರೇಶ್, ಲಕ್ಷ್ಮೀವೆಂಕಟೇಶ್, ಮುನಿರಾಮು, ಲೀಲಾಕುಮಾರ್, ಮಂಜಮ್ಮ, ಸುರೇಂದ್ರ, ಯಶ್ವಂತ್, ಕೃಷ್ಣ ಇದ್ದರು.
ಹಂಚೀಪುರ ಬಳಿಯ ಗೃಹಕಚೇರಿಯಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್‌ರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್, ಕಸಬಾ ಅಧ್ಯಕ್ಷ ರಮೇಶ್, ಭವಾನಿಶಂಕರ್ ಬೈರೇಗೌಡ್ರು, ನಗರಸಭೆ ಸದಸ್ಯೆ ಪುಷ್ಪಲತಾ ಮಾರೇಗೌಡ, ವಕೀಲ ಕನಕರಾಜು, ಮುಖಂಡ ದೇವನಹಳ್ಳಿ ಸುರೇಶ್, ಲಕ್ಷ್ಮೀವೆಂಕಟೇಶ್, ಮುನಿರಾಮು, ಲೀಲಾಕುಮಾರ್, ಮಂಜಮ್ಮ, ಸುರೇಂದ್ರ, ಯಶ್ವಂತ್, ಕೃಷ್ಣ ಇದ್ದರು.
Published on

ನೆಲಮಂಗಲ ಶಾಸಕರಿಗೆ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ

ನೆಲಮಂಗಲ: ನಮ್ಮ ಅಧಿಕಾರ ಅವಧಿಯಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಹೊಗಳದಿದ್ದರೂ ಪರವಾಗಿಲ್ಲ. ಆದರೆ, ಶಾಸಕರು ನನ್ನನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಎಚ್ಚರಿಕೆ ನೀಡಿದರು.

ಹಂಚೀಪುರ ಬಳಿಯ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯವಾಗಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 10 ವರ್ಷದ ಸಾಧನೆ ಏನು ಎಂದು ಶಾಸಕರು ಪ್ರಶ್ನೆ ಮಾಡುವ ಮೊದಲು ನನ್ನ ಅಧಿಕಾರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿದುಕೊಂಡು ಮಾತನಾಡಲಿ. ನನ್ನ ಅವಧಿಯಲ್ಲಿ 220 ಕೆವಿ ವಿದ್ಯುತ್ ಉಪಕೇಂದ್ರ ಮಂಜೂರಾಗಿದೆ, ಸುಮಾರು 19.5 ಕೋಟಿ ರೂಪಾಯಿ ವೆಚ್ಚದಲ್ಲಿ ಟಿ.ಬೇಗೂರು ತ್ಯಾಮಗೊಂಡ್ಲು ರಸ್ತೆ ಕಾಮಗಾರಿ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ಮತ್ತೊಮ್ಮೆ ಭೂಮಿಪೂಜೆ ಮಾಡಿದ್ದಾರೆ. ನಗರ ಮುಖ್ಯರಸ್ತೆಯಲ್ಲಿ ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಮೂಲ ಸೌಕರ್ಯ ಒದಗಿಸಿದ್ದೇನೆ. ಚುನಾವಣೆ ವೇಳೆ ರಾಜಕೀಯ ಮಾಡಬೇಕು, ಅಭಿವೃದ್ಧಿ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕು ಎಂದರು.

ಎಂಎಲ್ಸಿ ಎಸ್.ರವಿಗೆ ತಿರುಗೇಟು: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ಕಳೆದ 30 ವರ್ಷದಿಂದ ನೆಲಮಂಗಲದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದಿದ್ದಾರೆ. ರವಿ ಆಯ್ಕೆಯಾದಾಗಿನಿಂದ ತಾಲೂಕಿಗೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನೊಬ್ಬರನ್ನು ಪ್ರಶ್ನಿಸುವ ಮುನ್ನ ತನ್ನ ಸಾಧನೆ ಏನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಡಾ.ಕೆ.ಶ್ರೀನಿವಾಸಮೂರ್ತಿ ತಿರುಗೇಟು ನೀಡಿದರು.ಅಭಿವೃದ್ಧಿ ವಿಚಾರವಾಗಿ ತಾರತಮ್ಯ: ನಗರದ ಕೆರೆ ಅಭಿವೃದ್ಧಿಗೆ 6 ಕೋಟಿ ಹಾಗೂ ಮಳೆಗಾಲದಲ್ಲಿ ನಗರದ ರಾಜಕಾಲುವೆ ತುಂಬಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ, ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಮೈಲನಹಳ್ಳಿ ಗ್ರಾಮದ ಬಳಿ 5 ಎಕರೆ ಜಮೀನು ಮಂಜೂರು ಹಾಗೂ ಅನುದಾನ ಬಿಡುಗಡೆ ಸೇರಿ ನಗರೋತ್ಥಾನದಿಂದ ನಗರಸಭೆ ವ್ಯಾಪ್ತಿಯ ಅಭಿವೃದ್ಧಿಗಾಗಿ16 ಕೋಟಿ ಅನುದಾನ ಮಂಜೂರಾಗಿದೆ. ಆದರೆ ಶಾಸಕ ಎನ್.ಶ್ರೀನಿವಾಸ್ ತನ್ನ ಬೆಂಬಲಿತ ಸದಸ್ಯರ ವಾರ್ಡ್‌ನಲ್ಲಷ್ಟೇ ಕಾಮಗಾರಿ ನಡೆಸುತ್ತಿದ್ದು, ಜೆಡಿಎಸ್ ಸದಸ್ಯರಿಗೆ ಕಾಮಗಾರಿ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net