ತಂತ್ರಜ್ಞಾನವಿಲ್ಲದ ಜಗತ್ತು ಊಹಿಸುವುದು ಕಷ್ಟ

h19-mca
Published on

ಹುಬ್ಬಳ್ಳಿ: ಇಲ್ಲಿಯ ಶ್ರೀನಗರದ ಚೇತನ ಬಿಜಿನೆಸ್ ಸ್ಕೂಲ್‌ನಲ್ಲಿ ಎಂಸಿಎ ಮೊದಲ ಬ್ಯಾಚ್‌ನ ಪ್ರಾರಂಭೋತ್ಸವ ಗುರುವಾರ ಏರ್ಪಡಿಸಲಾಗಿತ್ತು.

ನವಚೇತನ ಸಂಸ್ಥಾಪಕ ನಾಗೇಂದ್ರ ಮಾಲಿ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನವಿಲ್ಲದ ಜಗತ್ತು ಊಹಿಸುವುದು ಕಷ್ಟ. ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ತಂತ್ರಜ್ಞಾನ ಅವಲಂಬಿಸಿದ್ದಾರೆ. ಎಲ್ಲ ಕೆಲಸಗಳು ಸಲೀಸಾಗಿ ನಡೆಯಲು ತಂತ್ರಜ್ಞಾನ ಕಾರಣ ಎಂದರು.

ಆರ್ಗಿಸ್ ಬಿಜಿನೆಸ್ ಸಲ್ಯೂಷನ್ ನಿರ್ದೇಶಕ ವೀರು ಉಪ್ಪಿನ ವಿಶೇಷ ಉಪನ್ಯಾಸ ನೀಡಿದರು.

ಸಂಸ್ಥೆ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಹೆಜ್ಜೆಯನ್ನು ಇಡುತ್ತಿದ್ದೇವೆ. ಜಾಗತಿಕ ಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ. ಎಂಸಿಎ ಕೋರ್ಸ್‌ಗೆ ರಾಜ್ಯ ಸರ್ಕಾರ, ಕರ್ನಾಟಕ ವಿವಿಯ ಎಐಸಿಟಿಇ ಮಾನ್ಯತೆ ಲಭಿಸಿದೆ ಎಂದರು.

ಪ್ರಮುಖರಾದ ವಿರೂಪಾಕ್ಷ ಕಟ್ಟಿಮನಿ, ಡಾ. ಭಾರ್ಗವ ರೇವಣಕರ, ಡಾ. ಅನಿರುದ್ಧ ಅಂಕೋಲೆಕರ ಮಾತನಾಡಿದರು.

ಸ್ನೇಹಾ, ಶಿಲ್ಪಾ, ಅನುಷಾ, ಪದ್ಮಶ್ರೀ ಮತ್ತು ವೈಶಾಲಿ ಪ್ರಾರ್ಥಿಸಿದರು. ಪ್ರೊ. ರವಿಕುಮಾರ ರೂಗಿ ಸ್ವಾಗತಿಸಿದರು. ಪ್ರೊ. ಶ್ರೇಯಸ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶ್ವೇತಾ ಸಜ್ಜನರ ನಿರೂಪಿಸಿದರು. ಶ್ವೇತಾ ಲಾಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net