ರಬಕವಿ-ಬನಹಟ್ಟಿಗೂ ಐಟಿಎಂಎಸ್ ಕ್ಯಾಮರಾ

ITMS camera for Rabakavi-Banahatti
ರಬಕವಿ-ಬನಹಟ್ಟಿ ತಾಲೂಕಿನ ಹೊರವಲಯದಲ್ಲಿ ಈ ಮೊದಲು ದಂಡ ವಿಧಿಸುತ್ತಿದ್ದ ಪೊಲೀಸರ ಕೈಯಲ್ಲಿ ಮೊಬೈಲ್ ಮೂಲಕ ಐಟಿಎಂಎಸ್ ಆಪ್‌ನಿಂದ ರಸ್ತೆ ನಿಯಮ ಉಲ್ಲಂಸುವವರ ೋಟೋ ತೆಗೆಯುವುದರೊಂದಿಗೆ ದಂಡ ವಿಧಿಸುತ್ತಿರುವುದು.
Published on

ರಬಕವಿ-ಬನಹಟ್ಟಿ : ದೇಶದಲ್ಲಿಯೇ ಪ್ರಥಮವಾಗಿ ಬೆಂಗಳೂರಿನಲ್ಲಿ 2022ರಲ್ಲಿ ಐಟಿಎಂಎಸ್ ಕ್ಯಾಮರಾ ಪ್ರಯೋಗ ಯಶಸ್ಸು ಕಂಡಿದ್ದು, ಈಗ ತಾಲೂಕಿನಲ್ಲಿಯೂ ಗುರುವಾರದಿಂದ ಕಾರ್ಯ ನಿರ್ವಹಿಸುತ್ತಿದೆ.

ಈ ಮೊದಲು ದಂಡದ ರಶೀದಿ ಪುಸ್ತಕ ಹಿಡಿದುಕೊಂಡು ನಗರದ ಹೊರ ವಲಯದಲ್ಲಿ ಟ್ರಾಫಿಕ್ ಕೆಲಸ ಮಾಡುತ್ತಿದ್ದ ಪೊಲೀಸರಿಂದ ಮತ್ತಷ್ಟು ಪರಿಣಾಮಕಾರಿಯಾಗಿ ರೂಲ್ಸ್ ಬ್ರೇಕ್ ಮಾಡುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ಹಾಕುವ ಯೋಜನೆಗೆ ಐಟಿಎಂಎಸ್ ಕ್ಯಾಮರಾ ಸಹಕಾರಿಯಾಗಿದೆ.

ಕ್ಯಾಮರಾ ಬದಲು ಮೊಬೈಲ್

ಸದ್ಯ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಹೈಯೆಂಡ್ ಕ್ಯಾಮರಾ ಬಳಸುವ ಬದಲಾಗಿ ಆಪ್ ಮೂಲಕ ಮೊಬೈಲ್‌ನಲ್ಲಿ ನಿಯಮ ಪಾಲಿಸದ ವಾಹನಗಳ ನಂಬರ್ ಸಮೇತ ವಾಹನ ಸವಾರರ ಪ್ರತಿ ಮೂಮೆಂಟ್ ರೆಕಾರ್ಡ್‌ನಿಂದ ತ್ರಿಬಲ್ ರೈಡಿಂಗ್, ವೇಗದ ಮಿತಿ, ರೆಡ್‌ಲೈಟ್ ವೈಲೇಷನ್, ಹೆಲ್ಮೆಟ್‌ಯಿಲ್ಲದೆ ಚಾಲನೆ, ಚಾಲನೆ ಸಂದರ್ಭ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಕದಿದ್ದರೆ ಮೊಬೈಲ್ ಆಪ್ ಮೂಲಕ ಸೆರೆ ಹಿಡಿದು ೋಟೋಗಳನ್ನು ರವಾನಿಸಲಾಗುತ್ತದೆ.

ದಂಡದ ಪಾವತಿ ಮನೆಗೆ

ನಿಯಮ ಉಲ್ಲಂಸಿದ ವಾಹನ ಸವಾರರ ಮನೆಗೆ ಸಾಕ್ಷಿ ಸಮೇತ ಮನೆಗೆ ದಂಡದ ಪಾವತಿ ತಲುಪುತ್ತದೆ. ಇದನ್ನು 24 ಗಂಟೆಯೊಳಗಾಗಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರತಿ ದಿನ ಬೆಳಗ್ಗೆ 10 ರಿಂದ 12 ಗಂಟೆಯೊಳಗಾಗಿ ದಂಡ ಭರಿಸಿ ಪಾವತಿ ಸ್ವೀಕರಿಸಬೇಕು.

ಬೆಚ್ಚಿ ಬಿದ್ದ ಸವಾರರು

ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುವುದು ಸಾಮಾನ್ಯವಾಗಿದೆ. ಅಂಥವರಿಗೆ ಬುಧವಾರ ದಿಢೀರ್ ಶಾಕ್ ಉಂಟಾಗಿದೆ. ಕೇವಲ ಮೊಬೈಲ್‌ನಲ್ಲಿ ೋಟೋ ತೆಗೆದರೆ ನಮಗೇನು ಸಂಬಂಧವೆಂದು ನಿರ್ಲಕ್ಷೃವಹಿಸಿದ್ದಾರೆ. ಅಂಥವರಿಗೂ ದಂಡದ ಬಿಸಿ ತಟ್ಟುವುದು ಖಚಿತ, ದಿನಂಪ್ರತಿ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ನಿಯಮ ಮೀರಿ ಸಂಚರಿಸಿದರೆ ಅಂಥವರ ಮನೆಗೆ ದಂಡದ ಪಾವತಿ ನಿಶ್ಚಿತ.

ಬಹುದಿನಗಳಿಂದ ನಿಯಮ ಉಲ್ಲಂಸುವ ವಾಹನ ಸವಾರರಿಂದ ಟ್ರಾಫಿಕ್ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇದೀಗ ಐಟಿಎಂಎಸ್ ಮೊಬೈಲ್ ಆಪ್ ಮೂಲಕ ದಂಡ ವಿಧಿಸಲಾಗುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯ ರಸ್ತೆ ನಿಯಮ ಪಾಲಿಸಬೇಕು. ಶಾಂತಾ ಹಳ್ಳಿ, ಪಿಎಸ್‌ಐ, ಬನಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net