ಕೆರೂರಿಗೂ ಬಂತು ಐಟಿಎಂಎಸ್ ಕ್ಯಾಮರಾ

ITMS camera also arrived in Kerur
ಕೆರೂರಲ್ಲಿ ಸಂಚಾರಿ ನಿಯಮ ಉಲ್ಲಸಿದವರನ್ನು ಮೊಬೈಲ್ ಕ್ಯಾಮರಾ ಮೂಲಕ ಸೆರೆ ಹಿಡಿಯುತ್ತಿರುವುದು.
Published on

ಕೆರೂರ : ವಾಹನ ಸವಾರರೆ ಎಚ್ಚರ! ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡದ ರಶೀದಿ ನೇರವವಾಗಿ ಮನೆಗೆ ಬರಲಿದೆ.

ಪಟ್ಟಣದಲ್ಲಿ ಭಾನುವಾದಿಂದ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವವರಿಗೆ ಐಟಿಎಂಎಸ್ ಕ್ಯಾಮರಾ ಮೊಬೈಲ್ ಆ್ಯಪ್ ಮೂಲಕ ದಂಡ ವಿಧಿಸಲಾಗುತ್ತಿದೆ.

ಈ ಮೊದಲು ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರು. ವಿನೂತನ ತಂತ್ರಜ್ಞಾನದ ಐಟಿಎಂಎಸ್ ಕ್ಯಾಮರಾ ಬಳಕೆಯಿಂದ ನಿಯಮ ಉಲ್ಲಂಸುವವರನ್ನು ಪತ್ತೆ ಹಚ್ಚಲು ಅನೂಕೂಲವಾಗಿದೆ. ಸಂಚಾರಿ ನಿಯಮ ಉಲ್ಲಂಸಿ ರಸ್ತೆಯಲ್ಲಿ ಸಂಚರಿಸಿದರೆ, ಐಟಿಎಂಎಸ್ ಕ್ಯಾಮರಾದಲ್ಲಿ ನಿಮ್ಮ ವಾಹನ ಸಂಖ್ಯೆ ರೆಕಾರ್ಡ್ ಆಗುತ್ತದೆ. ನೀವು ಪೊಲೀಸರು ಫೋಟೋ ತೆಗೆದಾಗ ನಮಗೆ ಏನು ಸಂಬಂಧವಿಲ್ಲವೆದು ಸಂಚರಿಸಿದರೆ ದಂಡದ ಪಾವತಿ ನಿಮ್ಮ ಮನೆಗೆ ಬರುತ್ತದೆ. 24 ಗಂಟೆಯೊಳಗೆ ಪಾವತಿಸಿ ರಶೀದಿ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net