ಐಟಿಎಫ್ ವರ್ಲ್ಡ್ ಟೆನ್ನಿಸ್ ಟೂರ್ನಿ ಅ. 15ರಿಂದ

29 Dwd 1
Published on

ಧಾರವಾಡ: ಐಟಿಎಫ್ ವರ್ಲ್ಡ್ ಟೆನ್ನಿಸ್ ಟೂರ್ನಮೆಂಟ್‌ಗೆ ಧಾರವಾಡ ಆತಿಥ್ಯ ವಹಿಸಲಿದ್ದು, ಅ. 15ರಿಂದ 22ರವರೆಗೆ ಆಯೋಜಿಸಲಾಗಿದೆ. 25,000 ಡಾಲರ್ ಮೊತ್ತದ ಪ್ರಶಸ್ತಿ ಒಳಗೊಂಡಿದ್ದು, ಪಂದ್ಯಗಳ ಆಯೋಜನೆಗೆ 6 ಕೋರ್ಟ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಶನ್ (ಡಿಡಿಎಲ್‌ಟಿಎ) ಅಧ್ಯಕ್ಷ ಹಾಗೂ ಜಿಲ್ಲಾಽಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಜಿಲ್ಲಾ ಲಾನ್ ಟೆನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಪಂದ್ಯಾವಳಿ ವೀಕ್ಷಣೆಗೆ ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಉಚಿತ ಪ್ರವೇಶ ಇರಲಿದೆ. ಕ್ರೀಡಾ ಪರಿಕರಗಳ ಮಾರಾಟ ಮತ್ತು ಮಾಹಿತಿ ನೀಡುವ ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ಸ್ಥಳೀಯ ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರೋತ್ಸಾಹಿಸಲಾಗುವುದು ಎಂದರು.
ಜಿಲ್ಲಾ ಲಾನ್ ಟೆನ್ನಿಸ್ ಕೋರ್ಟ್ ಬ್ರಿಟೀಷರ ಆಡಳಿತಾವಽಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 17 ವರ್ಷಗಳ ನಂತರ ಧಾರವಾಡಕ್ಕೆ ಅಂತಾರಾಷ್ಟ್ರೀಯ ಲಾನ್ ಟೆನ್ನಿಸ್ ಪಂದ್ಯಾವಳಿ ಆಯೋಜಿಸುವ ಅವಕಾಶ ಸಿಕ್ಕಿದೆ. 15ಕ್ಕೂ ಹೆಚ್ಚು ದೇಶಗಳ ೧೦೦ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಭಾರತೀಯ ಖ್ಯಾತನಾಮರು ಭಾಗವಹಿಸಲಿದ್ದಾರೆ. ಇಲ್ಲಿ ಲಾನ್ ಟೆನ್ನಿಸ್ ತರಬೇತಿಗೆ ಉತ್ತಮ ತರಬೇತುದಾರರ ಸೌಲಭ್ಯವಿದೆ. ಮಕ್ಕಳಲ್ಲಿ ಲಾನ್ ಟೆನ್ನಿಸ್ ಆಸಕ್ತಿ ಬೆಳಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net