

ಧಾರವಾಡ: ನಗರದ ಜಿಲ್ಲಾ ಲಾನ್ ಟೆನಿಸ್ ಮೈದಾನದಲ್ಲಿ ಡಿಡಿಎಲ್‌ಟಿಎ ಆಯೋಜಿಸಿರುವ ಅಂತರಾಷ್ಟ್ರೀಯ ಪುರುಷರ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಸಿಂಗಲ್ಸ್ ಪಂದ್ಯಗಳು ಶುಕ್ರವಾರ ನಡೆದು ಶ್ರೇಯಾಂಕಿತ ನಾಲ್ವರು ಆಟಗಾರರು ಸೆಮಿಫೈನಲ್ ಪ್ರವೇಶಿಸಿದರು.
ಕ್ವಾರ್ಟರ್ ಫೈನಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಅಮೆರಿಕದ ನಿಕ್ ಚಾಪೆಲ್, ಎದುರಾಳಿ ಆಟಗಾರ 7ನೇ ಶ್ರೇಯಾಂಕಿತ ಸಿದ್ಧಾರ್ಥ ರಾವತ್ ಅವರನ್ನು 6-2, 6-4ರಿಂದ ಪರಾಭವಗೊಳಿಸಿ ಸೆಮಿಫೈನಲ್ ಪ್ರವೇಶಿಸಿದರು.
2 ಗಂಟೆಗೂ ಹೆಚ್ಚು ಕಾಲ ನಡೆದ ಇನ್ನೊಂದು ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಬೊಗ್ದಾನ್ ಬೋಬ್ರೋ ಅವರು 6ನೇ ಶ್ರೇಯಾಂಕಿತ ್ರೆಂಚ್ ಆಟಗಾರ ್ರೆೆರೆಂಟ್ ಬ್ಯಾಕ್ಸ್ ವಿರುದ್ಧ 7-6 (6), 7-6 (3) ಅಂಕಗಳಿಂದ ಜಯಿಸಿದರು.
3ನೇ ಶ್ರೇಯಾಂಕಿತ ಆಟಗಾರ ದಿಗ್ವಿಜಯ ಪ್ರತಾಪಸಿಂಗ್ ಅವರು ಜಪಾನ್‌ನ ಖಜುಕಿ ನಿಶಿವಾಕಿ ಅವರನ್ನು 6-4, 6-7 (3) 6-2 ಅಂಕಗಳಿಂದ ಪರಾಭವಗೊಳಿಸಿದರು.
ಮತ್ತೊಂದು ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಆಟಗಾರ ರಾಮಕುಮಾರ ರಾಮನಾಥನ್ ತಮ್ಮೆಲ್ಲ ಕೌಶಲಗಳನ್ನು ಪಣಕ್ಕಿಟ್ಟು ಆಡಿ, 8ನೇ ಶ್ರೇಯಾಂಕಿತ ಆಟಗಾರ ಎಸ್.ಡಿ. ಪ್ರಜ್ವಲದೇವ ಅವರನ್ನು 6-4, 4-6, 6-1 ಅಂಕಗಳಿಂದ ಪರಾಭವಗೊಳಿಸಿ ಸೆಮೀಸ್ ಪ್ರವೇಶಿದರು.
ಸೆಮಿಫೈನಲ್ಸ್‌ನಲ್ಲಿ ರಾಮಕುಮಾರ ಅವರು ದಿಗ್ವಿಜಯ ಪ್ರತಾಪ್‌ಸಿಂಗ್ ಅವರನ್ನು ಎದುರಿಸಲಿದ್ದರೆ, ಬೋಗ್ದಾನ್ ಬೋಬ್ರೋ ಅವರು ನಿಕ್ ಚಾಪೆಲ್ ಅವರನ್ನು ಎದುರಿಸಲಿದ್ದಾರೆ.
* ಡಬಲ್ಸ್ ಫೈನಲ್ ಇಂದು:
ಶನಿವಾರ ನಡೆಯಲಿರುವ ಅಂತಿಮ ಪಂದ್ಯದ ಹಣಾಹಣಿಗೆ ಪೂರ್ವಭಾವಿಯಾಗಿ ನಡೆದ ಡಬಲ್ಸ್ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರರಾದ ಸಾಯಿ ಕಾರ್ತಿಕ್‌ರೆಡ್ಡಿ ಗಂಟಾ ಮತ್ತು ಮನೀಶ್ ಸುರೇಶಕುಮಾರ ಜೋಡಿ, 4ನೇ ಶ್ರೇಯಾಂಕಿತ ಸಿದ್ಧಾಂತ ಭಾಟಿಯಾ ಮತ್ತು ವಿಷ್ಣುವರ್ಧನ್ ಜೋಡಿಯನ್ನು 3-6, 7-6 (3), 11-13 ಅಂಕಗಳಿಂದ ಪರಾಭವಗೊಳಿಸಿತು. ಈ ಜೋಡಿ ೈನಲ್ಸ್‌ನಲ್ಲಿ ಎಸ್.ಡಿ. ಪ್ರಜ್ವಲದೇವ ಮತ್ತು ನಿತಿನಕುಮಾರ ಸಿನ್ಹಾ ಜೊತೆ ಸೆಣಸಲಿದೆ. ಪ್ರಜ್ವಲದೇವ ಮತ್ತು ನಿತಿನಕುಮಾರ ಸಿನ್ಹಾ ಜೋಡಿ ದಿಗ್ವಿಜಯ ಪ್ರತಾಪಸಿಂಗ್ ಮತ್ತು ಕರಣಸಿಂಗ್ ಜೋಡಿಯನ್ನು ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದೆ.
* ಕ್ವಾರ್ಟರ್ ಫೈನಲ್ನ ಸಿಂಗಲ್ಸ್ ಫಲಿತಾಂಶ:
ಅಮೆರಿಕದ ನಿಕ್ ಚಾಪೆಲ್ 6-2, 6-4 ಅಂಕಗಳಿಂದ ಸಿದ್ಧಾರ್ಥ ರಾವತ್ ಅವರನ್ನು ಪರಾಭವಗೊಳಿಸಿದರು. ಬೊಗ್ದಾನ್ ಬೋಬ್ರೋ 7-6 (6), 7-6 (3) ಅಂಕಗಳಿಂದ ್ರೆೆರೆಂಟ್ ಬ್ಯಾಕ್ಸ್‌ಗೆ ಸೋಲುಣಿಸಿದರು. ದಿಗ್ವಿಜಯ ಪ್ರತಾಪಸಿಂಗ್ 6-4, 6-7 (3), 6-2 ಅಂಕಗಳಿಂದ ಜಪಾನ್‌ನ ಖಜುಕಿ ನಿಶಿವಾಕಿ ಅವರನ್ನು ಮಣಿಸಿದರೆ, ರಾಮಕುಮಾರ ರಾಮನಾಥನ್ 6-4,4-6, 6-1 ಅಂಕಗಳಿಂದ ಎಸ್.ಡಿ. ಪ್ರಜ್ವಲ್‌ದೇವ ಅವರನ್ನು ಪರಾಭವಗೊಳಿಸಿದರು.
* ಸೆಮಿಫೈನಲ್ ಡಬಲ್ಸ್:
ಸಾಯಿ ಕಾರ್ತಿಕರೆಡ್ಡಿ ಗಂಟಾ ಮತ್ತು ಮನೀಶ ಸುರೇಶಕುಮಾರ ಜೋಡಿ ಸಿದ್ಧಾಂತ ಭಾಟಿಯಾ ಮತ್ತು ವಿಷ್ಣುವರ್ಧನ್ ಜೋಡಿಯನ್ನು 3-6, 7-6 (3) 11-13 ಅಂಕಗಳಿಂದ ಪರಾಭವಗೊಳಿಸಿತು. ಪ್ರಜ್ವಲ್ದೇವ ಮತ್ತು ನಿತಿನಕುಮಾರ ಸಿಂಗ್ ಜೋಡಿ ದಿಗ್ವಿಜಯ ಪ್ರತಾಪಸಿಂಗ್ ಮತ್ತು ಕರಣಸಿಂಗ್ ಜೋಡಿಯನ್ನು 6-3, 6-3ರಿಂದ ಪರಾಭವಗೊಳಿಸಿತು.