ಧಾರವಾಡ ಐಟಿಎಫ್ ಪುರುಷರ ಟೆನಿಸ್ ಟೂರ್ನಿ; ಪ್ರಜ್ವಲ್‌ದೇವ್- ನಿತಿನ್‌ಕುಮಾರ್ ಸಿನ್ಹಾಗೆ ಡಬಲ್ಸ್ ಪ್ರಶಸ್ತಿ

web
Published on

ಮಂಜುನಾಥ ಅಂಗಡಿ ಧಾರವಾಡ
ಇಲ್ಲಿನ ಡಿಡಿಎಲ್‌ಟಿಎ ಮೈದಾನದಲ್ಲಿ ನಡೆಯುತ್ತಿರುವ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಸೆಮಿಫೈನಲ್ಸ್ ಹಾಗೂ ಡಬಲ್ಸ್ ಫೈನಲ್ಸ್ ಪಂದ್ಯಗಳು ಶನಿವಾರ ನಡೆದವು. 40 ದೇಶಗಳ ಆಟಗಾರರು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಭಾರತೀಯ ಆಟಗಾರರು ಪಾರಮ್ಯ ಮೆರೆದರು. ಭಾರತದ ಎಸ್.ಡಿ. ಪ್ರಜ್ವಲ್‌ದೇವ್ ಹಾಗೂ ಕೋಲ್ಕತ್ತಾದ ನಿತಿನ್‌ಕುಮಾರ್ ಸಿನ್ಹಾ ಡಬಲ್ಸ್ ಜಯಿಸಿದರೆ, ಇನ್ನಿಬ್ಬರು ಭಾರತೀಯ ಆಟಗಾರರು ಸಿಂಗಲ್ಸ್ ಫೈನಲ್ಸ್ ಪ್ರವೇಶಿಸಿದರು.
ಮೊದಲ ಸೆಮಿ ಫೈನಲ್ಸ್ ಪಂದ್ಯದಲ್ಲಿ ೪ನೇ ಶ್ರೇಯಾಂಕಿತ ಚೆನ್ನೆÊನ ರಾಮಕುಮಾರ ರಾಮನಾಥ್ ಅಗ್ರ ಶ್ರೇಯಾಂಕಿತ ಅಮೆಕದ ನಿಕ್ ಚಾಪೆಲ್ ಅವರನ್ನು ಭಾರೀ ಸೆಣಸಾಟದ ನಂತರ ೩-೬, ೬-೩, ೭-೬ (೭-೨)ರಿಂದ ಪರಾಭವಗೊಳಿಸಿ ಫೈನಲ್ಸ್ ಪ್ರವೇಶಿಸಿದರು.
ಇನ್ನೊಂದು ಸೆಮಿಫೈನಲ್ಸ್ ನಲ್ಲಿ ೩ನೇ ಶ್ರೇಯಾಂಕಿತ ಹರಿಯಾಣದ ದಿಗ್ವಿಜಯ ಪ್ರತಾಪಸಿಂಗ್, ರಷ್ಯಾದ ಬೋಗ್ಡಾನ್ ಬೊಬ್ರೋ ವಿರುದ್ಧ ೬-೪, ೬-೨ (೭-೨), ೬-೪ರಿಂದ ಪ್ರಯಾಸಕರ ಗೆಲವು ಸಾಽಸಿ ಫೈನಲ್ಸ್ ತಲುಪಿದರು.

ಡಬಲ್ಸ್ ಪ್ರಶಸ್ತಿಗಾಗಿ ರೋಚಕ ಸೆಣಸಾಟ:
೩ನೇ ಶ್ರೇಯಾಂಕಿತ ಜೋಡಿ ಮೈಸೂರಿನ ಎಸ್.ಡಿ. ಪ್ರಜ್ವಲ್‌ದೇವ್ ಮತ್ತು ನಿತಿನಕುಮಾರ್ ಸಿನ್ಹಾ ಜೋಡಿ ಡಬಲ್ಸ್ ಅಂತಿಮ ಪಂದ್ಯದಲ್ಲಿ ಶ್ರೇಯಾಂಕ ರಹಿತ ಜೋಡಿ ಹೈದ್ರಾಬಾದ್‌ನ ಸಾಯಿಕಾರ್ತಿಕ ರೆಡ್ಡಿ ಗಂಟಾ ಮತ್ತು ಚೆನ್ನೆನ ಮನಿಶ ಸುರೇಶಕುಮಾರ ಅವರನ್ನು ೬-೪, ೬-೩ ರಿಂದ ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿ ಡಬಲ್ಸ್ ಪ್ರಶಸ್ತಿ ಮತ್ತು ೧,೫೦೦ ಅಮೆರಿಕನ್ ಡಾಲರ್ ನಗದು ಬಹುಮಾನ ಪಡೆದರು. ರನ್ನರ್‌ಅಪ್ ರೆಡ್ಡಿ ಮತ್ತು ಮನಿಶ ಜೋಡಿ ೯೦೦ ಅಮೆರಿಕನ್ ಡಾಲರ್‌ಗೆ ತೃಪ್ತಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net