ಇಟಗಿ ಉತ್ಸವ ಸಮ್ಮೇಳನಾಧ್ಯಕ್ಷರಾಗಿ ಮಾತೋಶ್ರೀ

IMG_20241225_205107_219.jpg
Published on

ಹುಬ್ಬಳ್ಳಿ: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಇಟಗಿ ಉತ್ಸವ 2024 ರಾಜ್ಯ ಮಟ್ಟದ ಮಹಿಳಾ ಧಾಮಿರ್ಕ ಸಮ್ಮೇಳನದ ಅಧ್ಯಕ್ಷರಾಗಿ ಇಲ್ಲಿಯ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಧರ್ಮಾಧಿಕಾರಿ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಆಯ್ಕೆಯಾಗಿದ್ದಾರೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಪಾರ್ವತಿದೇವಿ ಹೊಂಬಳ, ಅನ್ನಪೂರ್ಣ ಮನ್ನಾಪುರ, ಶಾಂತಾ ಯಮನೂರ ಅವರು ಉತ್ಸವದ ಸಂಚಾಲಕ ಮಹೇಶಬಾಬು ಸುರ್ವೆ ಅವರ ಪರವಾಗಿ ದೇವಸ್ಥಾನದಲ್ಲಿ ಮಾತೋಶ್ರೀ ಅಮ್ಮನವರಿಗೆ ಗೌರವ ಸನ್ಮಾನ ಮಾಡಿ ಅಧಿಕೃತ ಆಹ್ವಾನ ನೀಡಿದರು.

ಹಿರಿಯರಾದ ಹನಮಂತಪ್ಪ ಧೂಪದ, ವಿನಾಯಕ ಹಿಂಡಿ, ರಾಜು ತಾಂಬೆ, ಯಲ್ಲಪ್ಪ ಕೋಸಗಿ, ಆನಂದ ಪವಾರ, ಸಂತೋಷ, ವಿದ್ಯಾ ದಾಗಿನದಾರ, ಶೋಭಾ ಅರ್ಕಚಾರಿ, ಗೀತಾ ಬದ್ದಿ, ಮಂಜುಳಾ ಹಬೀಬ, ಮರೆವ್ವಾ ಗೊಬ್ಬುರ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net