ಇಟಗಿ ಬಂದ್​ ಕರೆ ವಾಪಸ್​

21Kanapur1a
Published on

ಖಾನಾಪುರ: ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಗೆ ಮಂಜೂರಾಗಿದ್ದ ಪ್ರೌಢಶಾಲೆಯನ್ನು ಗಷ್ಟೋಳಿ ಗಾಮಕ್ಕೆ ವರ್ಗಾವಣೆ ಮಾಡಿದ ಕ್ರಮ ಖಂಡಿಸಿ ಶನಿವಾರ ಕರೆನೀಡಿದ್ದ ಇಟಗಿ ಬಂದ್​ ಅನ್ನು ಶಿಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್​, ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶಿಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ಈಗಾಗಲೇ ಈ ಶಾಲೆಯಲ್ಲಿ 8ನೇ ತರಗತಿ ಆರಂಭಗೊಂಡಿದ್ದು, ತರಗತಿಗೆ ನಿತ್ಯ 40ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಹೀಗಾಗಿ, ಇಟಗಿ ಗ್ರಾಮದಲ್ಲೇ ಪ್ರೌಢಶಾಲೆ ಆರಂಭಿಸಬೇಕು. ಗಷ್ಟೋಳಿ ಗ್ರಾಮಕ್ಕೆ ಬೇರೆ ಪ್ರೌಢಶಾಲೆ ಮಂಜೂರುಗೊಳಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆಸಿದ ಶಿಕ್ಷಣ ಸಚಿವರು, ತಕ್ಷಣ ಮಾಹಿತಿ ಕಳುಹಿಸಿಕೊಡಿ ಇಟಗಿ ಗ್ರಾಮಕ್ಕೆ ಪ್ರೌಢಶಾಲೆ ಆರಂಭಿಸಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು. ಮಾಜಿ ಶಾಸಕ ಅರವಿಂದ ಪಾಟೀಲ, ಡಿಡಿಪಿಐ ಲೀಲಾವತಿ ಹಿರೇಮಠ, ಬಿಇಒ ಪಿ.ರಾಮಪ್ಪ, ಸಿಪಿಐ ಸಿದ್ಧಬಸವನಗೌಡ ಪಾಟೀಲ, ಪಿಎಸ್​ಐ ಪ್ರವಿಣ ಗಂಗಗೋಳ ಸ್ಥಳಕ್ಕೆ ಭೇಟಿ ನೀಡಿದರು. ಪಡೆಪ್ಪ ಬೋಗೂರ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ, ಭರತೇಶ ಜೋಳದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net