ದೇವರ ಕಲ್ಪನೆ ನೀಡಿದವರು ವಿಶ್ವಕರ್ಮರು

gld 12-2
ಗುಳೇದಗುಡ್ಡದಲ್ಲಿ ವಿಶ್ವಕರ್ಮ ಸಮಾಜದ ತಾಲೂಕುಮಟ್ಟದ ಸಮಾವೇಶ ನಡೆಯಿತು. ಶಾಸಕ ಭಿಮಸೇನ ಚಿಮ್ಮನಟ್ಟಿ, ಮಹೇಶ ಹೊಸಗೌಡರ, ತಾಲೂಕು ಅಧ್ಯಕ್ಷ ಚಂದ್ರಶೇಖರ ಬಡಿಗೇರ, ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ಗೌರವಾಧ್ಯಕ್ಷ ಸುಭಾಷ ಬಡಿಗೇರ, ಹನುಮಂತ ಪತ್ತಾರ ಇತರರಿದ್ದರು.
Published on

ಗುಳೇದಗುಡ್ಡ: ತಮ್ಮ ಕಲೆಯ ಮೂಲಕ ನಮಗೆ ದೇವರ ರೂಪದ ಕಲ್ಪನೆ ನೀಡಿದವರು ವಿಶ್ವಕರ್ಮರು. ಶಿಲ್ಪಕಲೆಗೆ ವಿಶ್ವಕರ್ಮರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಭಿಮಸೇನ ಚಿಮ್ಮನಟ್ಟಿ ಹೇಳದರು.

ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಪರಿಷತ್ತು, ತಾಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸೇವಾ ಸಂಘ, ಅನ್ನಪೂಣೇಶ್ವರಿ ಮಹಿಳಾ ಮಂಡಳ ಮತ್ತು ವಿಶ್ವಕರ್ಮ ತರುಣ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ, ತಾಲೂಕುಮಟ್ಟದ ವಿಶ್ವಕರ್ಮ ಸಮಾಜದ ಜಾಗೃತಿ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಕಲಾವಿದರಾದ ವಿಶ್ವಕರ್ಮ ಸಮಾಜದವರು ತಮ್ಮ ಮಕ್ಕಳಿಗೆ ತಮ್ಮ ಪರಂಪರಾಗತ ಉದ್ಯೋಗದ ಜೊತೆಗೆ ಶಿಕ್ಷಣವನ್ನೂ ನೀಡಬೇಕು. ಸಮಾಜ ಸಂಘಟಿತಗೊಳಿಸಿದಾಗ ಮಾತ್ರ ಯಾವುದೇ ಸಮಾಜ ಅಭಿವೃದ್ಧಿ ಹೊಂದುತ್ತದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ವಿಶ್ವಕರ್ಮ ಸಮಾಜ ಕಾಯಕ ಸಮಾಜವಾಗಿದ್ದು, ವಿಶ್ವಕರ್ಮ ಸಮಾಜ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಬಲವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹೇಳಿದರು.

ಬೆಂಗಳೂರಿನ ಮಹೇಶ ಗುರೂಜಿ ಸ್ವಾಮಿಗಳು, ಮುರನಾಳದ ಜಗನ್ನಾಥಸ್ವಾಮಿ ಮಹಾಪುರಷರು, ಗದ್ದನಕೇರಿಯ ಭಾಸ್ಕರಸ್ವಾಮಿ ಮಹಾಪುರುಷರು, ಹೊನಗನಹಳ್ಳಿಯ ಸಂಗಪ್ಪಜ್ಜ ಶರಣರು, ಕಗಲಗೊಂಬದ ರಾಮಚಾರಿ ವಿಶ್ವಬ್ರಾಹ್ಮಣ ಸಾನ್ನಿಧ್ಯ ವಹಿಸಿದ್ದರು.

ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಮುನ್ನ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತ ಮುರಳಿ ಆಚಾರ್ಯ ಕುಂಭಮೇಳಕ್ಕೆ ಚಾಲನೆ ನೀಡಿದರು. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಮಹೇಶ ಹೊಸಗೌಡರ, ತಾಲೂಕು ಅಧ್ಯಕ್ಷ ಚಂದ್ರಶೇಖರ ಬಡಿಗೇರ, ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ಗೌರವಾಧ್ಯಕ್ಷ ಸುಭಾಷ ಬಡಿಗೇರ, ಹನುಮಂತ ಪತ್ತಾರ, ಮಾನಪ್ಪ ಬಡಿಗೇರ, ಸಂಘದ ಪ್ರಧಾನ ಕಾರ್ಯದರ್ಶಿ ಅಖಂಡೇಶ್ವರ ಪತ್ತಾರ, ಮಹೇಶ ಬಿಜಾಪೂರ, ರುಕ್ಮಿಣಿ ಬಡಿಗೇರ, ಉಪತಹಸೀಲ್ದಾರ್ ವೀರೇಶ ಬಡಿಗೇರ, ಪ್ರಮೋದ ಕವಡಿಮಟ್ಟಿ, ಚಂದ್ರ ಪತ್ತಾರ, ಮಹಾರುದ್ರಪ್ಪ ಬಡಿಗೇರ, ಸುಮಿತ್ರಾ ಪತ್ತಾರ, ಮಹೇಶ ಬಡಿಗೇರ, ನೀಲಪ್ಪ ಬಡಿಗೇರ, ಈರಪ್ಪ ಬಡಿಗೇರ, ಲಚ್ಚಪ್ಪ ಕಂಬಾರ, ಮೌನೇಶ ಬಡಿಗೇರ, ಚಿದಾನಂದ ಬಡಿಗೇರ, ಬಸು ಬಡಿಗೇರ, ಸುಭಾಷ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net