

ರಾಯಚೂರು: ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದರ ಜತೆಗೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕೆಲಸವಾಗಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಹೇಳಿದರು.
ಸ್ಥಳೀಯ ಬಾಲಕಿರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಬುಧವಾರ ಏರ್ಪಡಿಸಿದ್ದ ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರುರ ದೇವ ಕುಸುಮಗಳು ಕೃತಿ ಲೋಕಾರ್ಪಣೆ ಹಾಗೂ ಜಿಲ್ಲಾ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಓದುವ ಹವ್ಯಾಸವನ್ನು ಬೆಳೆಸಬೇಕು. ಅದರಿಂದ ಅವರಲ್ಲಿ ಬುದ್ದಿಮತ್ತೆ ಹೆಚ್ಚಳವಾಗುವುದರ ಜತೆಗೆ ನಮ್ಮ ಸಂಸ್ಕೃತಿಯ ಪರಿಚಯವನ್ನು ನೀಡಿದಂತಾಗಲಿದೆ. ಪಠ್ಯದ ಜತೆಯಲ್ಲಿ ಇನ್ನಿತರ ವಿಷಯಗಳ ಬಗ್ಗೆ ಅರಿತುಕೊಳ್ಳಲು ಮಕ್ಕಳು ಅರಿತುಕೊಳ್ಳಬೇಕು ಮುಂದಾಗಬೇಕು ಎಂದರು.
ಸಾಹಿತಿ ಡಾ.ಎಸ್.ಎಂ.ಸಜ್ಜನ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆ ಬಗ್ಗೆ ಮಾತ್ರ ಕಾಳಜಿ ತೋರಿದರೆ ಸಾಲದು. ಅವರಲ್ಲಿ ಪುಸ್ತಕ, ಪರಿಸರ ಪ್ರೀತಿ ಮತ್ತು ಸಾಮಾಜಿಕ ಕಳಕಳಿ, ವೌಲ್ಯಗಳನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಸಾಧಕರಾಗಲು ಸಾಧ್ಯವಾಗಲಿದೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್‌ನ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಶಂಕರದೇವರು ಹಿರೇಮಠ ಮಾತನಾಡಿ, ಕಳೆದ ಐದು ವರ್ಷದಲ್ಲಿ ಪರಿಷತ್‌ನಿಂದ ರಾಜ್ಯದಲ್ಲಿ ಅನೇಕ ಮಕ್ಕಳ ಕವನ ವಾಚನ, ಕವಿಗೋಷ್ಠಿ, ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿ ಮಕ್ಕಳಲ್ಲಿ ಸಾಹಿತ್ತಿಕ ಅಭಿರುಚಿ ಬೆಳೆಸುವ ಕೆಲಸ ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ಭೀಮೋಜಿರಾವ್ ಜಗತಾಪ್, ಮಂಡಲಗಿರಿ ಪ್ರಸನ್ನ, ಶಾರದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಕಿಶೋರಕುಮಾರ, ವಾಣಿಜ್ಯೋದ್ಯಮಿಗಳಾದ ರವಿ ಮಂಚಾಲ, ಸಂಗಪ್ಪಗೌಡ ಮದರಕಲ್, ಮುಖ್ಯಗುರು ಶ್ರೀನಿವಾಸ, ಶಿಕ್ಷಕರಾದ ಡಾ.ವೆಂಕಟೇಶ ನವಲಿ, ಉದಯಕುಮಾರ ಉಪಸ್ಥಿತರಿದ್ದರು.