

ಗದಗ: "ಮಾಹಿತಿ' ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೆ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಇತ್ತಿಚೆಗೆ ಬೆರೆತಿದೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ ಎಂದು ಡಯಟ್ ಪ್ರಾಚಾರ್ಯ ಜಿ. ಎಲ್. ಬಾರಾಟಕ್ಕೆ ಹೇಳಿದರು.
ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಗ್ರಾಮೀಣ ಮಾಹಿತಿ ತಂತ್ರಜ್ಞಾನ ಲಿಖಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನವು ಮಾನವನಿಗೆ ವರದಾನವಾಗಿದೆ. ಇದರ ಬಳಕೆಯಿಂದ ವಿಶ್ವ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆಯೆಂದರು ಎಂದರು. ಬಿಇಒ ವಿ. ವಿ. ನಡುವಿನಮನಿ, ಆರ್. ಎಸ್. ಬುರಡಿ, ಶಂಕರ ಹಡಗಲಿ, ಮಹಾದೇವಿ ಮಾಡಲಗೇರಿ, ಶ್ರೀಧರ ಬಡಿಗೇರ, ಶಿವಾನಂದ ಗಿಡ್ನಂದಿ, ಆರ್. ಜಿ. ಕವಲಗೇರಿ, ಕೆ. ವಿ. ಕೋರಡ್ಡಿ ಇತರರು ಇದ್ದರು.