

ಶಿರಸಿ: ನಗರದ ಮೂರು ಫೈನಾನ್ಸ ಸಂಸ್ಥೆಗಳ ಮೇಲೆ ಆದಾಯತೆರಿಗೆ ಮಂಗಳೂರು ವಿಭಾಗದ ಅಧಿಕಾರಿಗಳು ಶನಿವಾರ ಸಂಜೆ ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು ಅವರ ಮನೆ ಸೇರಿದಂತೆ ಐದು ಕಡೆಗಳಲ್ಲಿ ಐಟಿ ದಾಳಿ ನಡೆದಿತ್ತು. ಶನಿವಾರ ದೀಪಕ ದೊಡ್ಢೂರು ಅವರ ಮಾಲೀಕತ್ವದ ರಾಜದೀಪ ಫೈನಾನ್ಸ್, ಎಂ.ವಿ.ಜೋಶಿ ಕಾನಮೂಲೆ ಅವರಿಗೆ ಸೇರಿದ ವಿಜಯಲಕ್ಷ್ಮೀ ಸೌಹಾರ್ದ ಸಹಕಾರಿ ಹಾಗೂ ಮಾರಿಕಾಂಬಾ ಮಹಿಳಾ ಸೌಹಾರ್ದ ನಿ. ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ ಲೆಕ್ಕ ಪತ್ರ ಪರಿಶೀಲನೆ ನಡೆಸಿದ್ದಾರೆ.