ಮಳೆಗೆ ತೆಂಗು, ಮಾವಿನ ಫಸಲು ನಾಶ

26arsph1ep
Published on

ಅರಸೀಕೆರೆ: ತಾಲೂಕಿನ ಹಾರನಹಳ್ಳಿ, ತಳಲತೊರೆ, ಕೋಡಿಮಠ ಸೇರಿದಂತೆ ವಿವಿಧೆಡೆ ಸೋಮವಾರ ಸಂಜೆ ಸುರಿದ ಮಳೆಗೆ ಹಲವೆಡೆ ಬಾಳೆ, ತೆಂಗು ಹಾಗೂ ಮಾವಿನ ಫಸಲು ನಾಶವಾಗಿದೆ.

ಕೋಡಿಮಠ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ರಂಗಸ್ವಾಮಿ ಎಂಬುವರ ಒಂದು ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳದಿದ್ದ ಗೊನೆ ಭರಿತ ಬಾಳೆ ಮುರಿದು ಬಿದ್ದಿದೆ. ಅಲ್ಲದೆ ತಳಲತೊರೆ ಗ್ರಾಮದ ನಿವೃತ್ತ ಶಿಕ್ಷಕ ಜಿ.ಬಸಪ್ಪ ಅವರ ಮಾವಿನ ತೋಟದಲ್ಲಿಯೂ ಫಸಲು ನೆಲಕಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net