ಗುತ್ತಿಗೆದಾರರ ಮನೆಗೆ ಐಟಿ ದಾಳಿ

IT raid
Published on

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಗುತ್ತಿಗೆದಾರ ಯು.ಬಿ. ಶೆಟ್ಟಿ ಅವರ ಧಾರವಾಡ ಮತ್ತು ಉಪ್ಪುಂದ ಮೂಲ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಗುರುವಾರ ಬೆಳಗ್ಗೆ ಮಂಗಳೂರು ನೋಂದಣಿ ಹೊಂದಿದ್ದ 2 ಕಾರುಗಳಲ್ಲಿ ಆಗಮಿಸಿದ 9 ಮಂದಿಯ ಐಟಿ ಅಧಿಕಾರಿಗಳ ತಂಡ ಕೆಲ ಸಮಯ ಮನೆಯಲ್ಲಿ ಪರಿಶೀಲನೆ ನಡೆಸಿ ತೆರಳಿದ್ದಾರೆ.

ಶೆಟ್ಟಿ ಅವರು ಧಾರವಾಡದಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದು, ತವರೂರು ಉಪ್ಪುಂದದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬೈಂದೂರಿನಲ್ಲಿ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದ್ದಾರೆ. ಬಾಡಾದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net