ಹಿಂದುಗಳ ಭಾವನೆ ಕೆರಳಿಸುವುದು ಸಲ್ಲ

4sgr2
ಸಾಗರದಲ್ಲಿ ಸಂಘ ಪರಿವಾರದವರು ಡಿವೈಎಸ್‌ಪಿ ಜತೆ ಚರ್ಚೆ ನಡೆಸಿದರು. ನಾರಾಯಣಪ್ಪ, ರಾಮಪ್ಪ, ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ರವೀಶಕುಮಾರ್ ಇತರರಿದ್ದರು.
Published on

ಸಾಗರ: ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಮಾರಿಕಾಂಬಾ ದೇವಸ್ಥಾನದ ಎದುರು ಸಾಗುತ್ತಿರುವ ಸಂದರ್ಭದಲ್ಲಿ ಧ್ವನಿವರ್ಧಕದಲ್ಲಿ ಪ್ರಚೋದನಾಕಾರಿ ಹಾಡುಗಳನ್ನು ಹಾಕಿ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿAದ ನಗರ ಠಾಣೆಗೆ ದೂರು ನೀಡಿ, ನಂತರ ಡಿವೈಎಸ್‌ಪಿ ಜತೆ ಚರ್ಚೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಕೆಲವರು ಡಿಜೆಯಲ್ಲಿ ಅಬ್ಬರದ ಹಾಡುಗಳನ್ನು ಹಾಕಿ ಪ್ರಚೋದನಾಕಾರಿ ರೀತಿ ವರ್ತಿಸಿದ್ದಾರೆ. ಇದು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಜತೆಗೆ ಅವರನ್ನು ಉದ್ರೇಕಗೊಳ್ಳುವಂತೆ ಮಾಡುವ ಪ್ರಯತ್ನವಾಗಿದೆ. ಇದನ್ನು ಸಂಘ ಪರಿವಾರದ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿದೆ ಎಂದು ಪರಿವಾರದ ಪ್ರಮುಖರು ತಿಳಿಸಿದರು.
ಈಗಾಗಲೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಅಖಂಡ ಭಾರತದ ಚಿತ್ರವನ್ನು ಹಸಿರುಬಣ್ಣದಲ್ಲಿ ಚಿತ್ರಿಸಿ, ನಡುವೆ ಔರಂಗಜೇಬನನ್ನು ಇರಿಸಿರುವ ಹಿಂದೆ ಬೇರೆ ಸಂಚು ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಾಗರದಲ್ಲೂ ಕೆಲವು ಕಿಡಿಗೇಡಿಗಳು ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಸುವುದು ಖಂಡಿತ. ತಕ್ಷಣ ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಘೋಷಣೆ ಹಾಕಿ ಹಿಂದು ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅ.ಪು.ನಾರಾಯಣಪ್ಪ, ಯು.ಎಚ್.ರಾಮಪ್ಪ, ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ರವೀಶಕುಮಾರ್, ಸುನೀಲ್ ರುದ್ರಪ್ಪ, ನವೀನ್ ಯಳವರಸೆ, ರಾಮು ಚವ್ಹಾಣ್, ಆಟೋ ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net