

ಗುಳೇದಗುಡ್ಡ: ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಅವರನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ಶಿಕ್ಷಕ ಬಿ.ಎಸ್. ಗೌಡರ ಹೇಳಿದರು.
ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದೇ ಕಾಯಕ. ಅದರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಶ್ರದ್ಧೆ ಇರಬೇಕು ಎಂದರು.
ಕೋಟೆಕಲ್ಲನ ಅಮರೇಶ್ವರ ಮಠದ ನೀಲಕಂಠ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಆಳುವವರನ್ನು ನಾವು ಗುಪ್ತವಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಮತದಾರರು ಉತ್ತಮರಾಗಿದ್ದಾರೆ ಮಾತ್ರ ನಾಯಕರು ಸಮರ್ಥರಾಗಿರಲು ಸಾಧ್ಯ ಎಂದರು.
ಆದರ್ಶ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಾದಾಮಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವು ಹಿರೇಮಠ, ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಪ್ರಭಾರಿ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ, ಬಸವರಾಜ ಅಂಗಡಿ, ಭರಮಪ್ಪ ಕಾಟನ್ನವರ, ವೈ.ವೈ. ದಳವಾಯಿ, ನಾಗಪ್ಪ ಹುಲ್ಲಿಕೇರಿ, ನೀಲನಗೌಡ ಗೌಡರ, ಶಿವಾನಂದ ಮುತ್ತಲಗೇರಿ, ಹನಮಂತ ಹೊಸಮನಿ, ಶಿಕ್ಷಕರಾದ ರಮೇಶ ಕತ್ತಿಕೈ, ರಮೇಶ ಹಂಜಿ, ಕೀರ್ತಿ ಬಡಿಗೇರ, ಭಾಗ್ಯಲಕ್ಷ್ಮೀ ಟಿ.ಎಚ್. ಬಸವರಾಜ ಸಿಂದಗಿಮಠ, ಸಂಗಮೇಶ ಉಳ್ಳಾಗಡ್ಡಿ, ರೇಣುಕಾ ಶಿಸ್ತಗಾರ, ಶ್ರೀನಿವಾಸ ಈಳಗೇರ, ಕಾವ್ಯಾ ಪಾಟೀಲ, ಬಸವರಾಜ ಚಿಕ್ಕಣ್ಣವರ, ಕೇಶವ ರಘುವೀರ ಅಶೋಕ ಪೂಜಾರಿ, ದುರ್ಗಾ ಮುಂಡರಗಿ, ಹನಮಂತ ಬಿ., ಸಿದ್ದಲಿಂಗೇಶ ಮುದೇನಗುಡಿ, ರಂಗನಾಥ ಈಳಗೇರ, ಅರ್ಚನಾ ಚಿಮ್ಮಲ, ಎಸ್.ಎಸ್. ರಾಠೋಡ ಮತ್ತಿತರರಿದ್ದರು.