ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯ

21 hkr 3
Published on

ಹಿರೇಕೆರೂರ: ಎಲ್ಲ ರೋಗಗಳ ಮೂಲ ಕುಡಿಯುವ ನೀರು. ಇದನ್ನು ಹೋಗಲಾಡಿಸುವ ಸದುದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಹತ್ತರ ಯೋಜನೆಗಳನ್ನು ಜಾರಿಗೆ ತರುತ್ತಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಕಾರ್ಮಿಕ ಭವನದ ಆವರಣದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ 32.29 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವಿತರಣಾ ಜಾಲ ಅಳವಡಿಸುವ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಯಾವುದೇ ಸರ್ಕಾರವಿರಲಿ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಅದರ ಕರ್ತವ್ಯವಾಗಿದೆ. ತನ್ಮೂಲಕ ರೋಗಗಳನ್ನು ತಡೆಗಟ್ಟಿ, ಆರೋಗ್ಯವಂತ ಸಮಾಜ ನಿರ್ಮಿಸಬಹುದಾಗಿದೆ. ಈ ಉದ್ದೇಶದಿಂದ ಇಂತಹ ಮಹತ್ತರ ಯೋಜನೆ ಜಾರಿಗೆ ಬಂದಿದೆ. ಗುತ್ತಿಗೆದಾರರು ಕಾಮಗಾರಿಗಳು ಕಳಪೆಯಾಗದಂತೆ ನಿಗದಿತ ಅವಧಿಯೊಳಗೆ, ತ್ವರಿತಗತಿಯಲ್ಲಿ ಕೆಲಸ ಮಾಡಬೇಕು ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ ಹೊಸಮನಿ ಮಾತನಾಡಿ, ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಜಾಲ ಅಳವಡಿಸುವ ಉದ್ದೇಶದಿಂದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಪಪಂ ಅಧ್ಯಕ್ಷೆ ಸುಧಾ ಚಿಂದಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷ ರಾಜು ಕರಡಿ, ಕಂಠಾಧರ ಅಂಗಡಿ, ಗುರುಶಾಂತ ಯತ್ತಿನಹಳ್ಳಿ, ರಜಿಯಾ ಅಸದಿ, ಹನುಮಂತ ಕುರಬರ, ಬಸವರಾಜ ಕಟ್ಟಿಮನಿ, ರಮೇಶ ತೋರಣಗಟ್ಟಿ, ಚಂದ್ರಕಲಾ ಕೋರಿಗೌಡ್ರ, ಸನಾವುಲ್ಲಾ ಮಕಾಂದಾರ, ಕವಿತಾ ಹಾರ‌್ನಳ್ಳಿ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಎನ್.ಟಿ., ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಕುಮಾರಪ್ಪ, ಇಂಜಿನಿಯರ್ ಅತಿಕ್ ಶಿಂಘೋಟಿ, ಗುತ್ತಿಗೆದಾರ ಸಂಜಯ ವಾಳ್ವೇಕರ್, ನಿಂಗಪ್ಪ ಚಳಗೇರಿ, ಭರಮಣ್ಣ ಹರಿಜನ, ಪಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net