ಭಾಷೆ ತುಳುಯನ್ನು ಉಳಿಸಿ ಬೆಳೆಸುವುದು ಕರ್ತವ್ಯ

mng_18 jun thulu
ಮಂಗಳೂರಿನ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜೈ ತುಲುನಾಡ್ ಸಂಘಟನೆ ಹತ್ತನೇ ವರ್ಷ ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ ತುಲುರಾಜ್ಯೊದ ಪೊರ್ಲೈಸಿರೊ ಎಂಬ ವಿನೂತನ ಕಾರ್ಯಕ್ರಮ ಸಂಪನ್ನಗೊಂಡಿತು.
Published on

ಮಂಗಳೂರು: ತಾಯಿಯಂತಿರುವ ತುಳು ನಮ್ಮ ಮಣ್ಣಿನ ಭಾಷೆ. ಹೀಗಿರುವಾಗ ಅದನ್ನು ಬೆಳೆಸಿಕೊಂಡು, ಉಳಿಸಿಕೊಂಡು ಹೋಗುವ ಕರ್ತವ್ಯ ನಮ್ಮದು ಎಂದು ತುಳು ರಂಗಭೂಮಿ ಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

ಮಂಗಳೂರಿನ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜೈ ತುಲುನಾಡ್ ಸಂಘಟನೆ ಹತ್ತನೇ ವರ್ಷ ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ ನಡೆದೆ ತುಲುರಾಜ್ಯೊದ ಪೊರ್ಲೈಸಿರೊ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಭಾಷೆಗಳಿಗಿಂತ ಮೊದಲ ಇದ್ದ ಭಾಷೆ ತುಳು. ಯಾವುದೇ ಒಂದು ಭಾಷೆ ಮೊದಲ ಸ್ಥಾನದಲ್ಲಿ ಇದ್ದರೆ ಸಂಸ್ಕೃತಿ ಕೂಡಾ ಮೊದಲಾಗಿರುತ್ತದೆ. ವಿದೇಶಿಗರು ಕೂಡ ತುಳು ಭಾಷೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ತುಳುನಾಡಿನಿಂದ ಹೊರಗೆ ಹೋದಾಗಲೇ ತುಳುನಾಡು, ತುಳು ಭಾಷೆಯ ಮಹತ್ವ ತಿಳಿಯುವುದು. ಮಾತೃಭಾಷೆಯ ಉಳಿವಿಗಾಗಿ ಜೈ ತುಲುನಾಡ್ ಸಂಘಟನೆಯ ಪ್ರಯತ್ನ ಶ್ಲಾಘನೀಯ ಎಂದರು.

ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಹಲವಾರು ವರ್ಷಗಳಿಂದ ಜೈ ತುಲುನಾಡ್ ಸಂಘಟನೆಯ ಬಗ್ಗೆ ತಿಳಿದುಕೊಳ್ಳುತ್ತಾ ಅವರೊಂದಿಗೆ ನಾನೂ ಇದ್ದವನು. ತುಳು ಪರವಾಗಿ ಅವರು ಮಾಡುವ ಕೆಲಸ ಮೆಚ್ಚತಕ್ಕದ್ದು, ಇಂತಹ ತುಳುಪರ ಕಾರ್ಯಕ್ರಮಗಳಿಗೆ ತುಳು ಅಕಾಡೆಮಿಯಿಂದ ಅನುದಾನಗಳು ದೊರೆಯಬೇಕಿದೆ ಎಂದರು.

ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷ ತಾರಿಪಾಡಿಗುತ್ತು ಉದಯ ಪೂಂಜ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ವಲೇರಿಯನ್ ಸಿಕ್ವೇರಾ, ದೈವಾರಾಧಕ ಪ್ರದೀಪ್ ಪೂಂಜಾಲ್ ಕಟ್ಟೆ ಕಜತ್ತೋಡಿ, ಜೈ ತುಲುನಾಡ್ ಸಂಘಟನೆಯ ಮಾಜಿ ಅಧ್ಯಕ್ಷರುಗಳಾದ ಅಶ್ವಥ್ ತುಲುವೆ, ಸುದರ್ಶನ್ ಸುರತ್ಕಲ್, ಜೈ ತುಲುನಾಡ್ ಘಟಕಗಳ ಅಧ್ಯಕ್ಷರುಗಳಾದ ಕಾಸರಗೋಡಿನ ಕುಶಲಾಕ್ಷಿ ವಿ. ಕಣ್ವತೀರ್ಥ, ಬೆಂಗಳೂರಿನ ನಿಧೀಶ್ ಶೆಟ್ಟಿ, ಉಡುಪಿಯ ಸುಶೀಲ ಕೊಡವೂರು, ಕಾರ್ಕಳದ ರವಿಚಂದ್ರ ಕಾರ್ಲ, ಮಂಗಳೂರಿನ ಮನೀಶ್ ಕುಮಾರ್ ಉಪಸ್ಥಿತರಿದ್ದರು.

ರೇಣುಕಾ ಕಣಿಯೂರು ಸ್ವಾಗತಿಸಿದರು, ಗೀತಾ ಲಕ್ಷ್ಮೀಶ್, ಕೀರ್ತನಾ ಸನಿಲ್ ವಂದಿಸಿದರು. ಸೌಮ್ಯ ಕುಂದರ್, ಅನನ್ಯ ಕರ್ಕೇರ ನಿರೂಪಿಸಿದರು.

------------------

ತುಲುರಾಜ್ಯೊದ ಪೊರ್ಲೈಸಿರೊ ಸಮಾರೋಪ

ಸಮಾರೋಪ ಸಮಾರಂಭವು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು. ಸಂಘಟನೆಯ ಅಧ್ಯಕ್ಷ ತಾರಿಪಾಡಿಗುತ್ತು ಉದಯ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಎ. ಸಿ. ಭಂಡಾರಿ ಹಾಗೂ ದಯಾನಂದ ಜಿ ಕತ್ತಲ್‌ಸಾರ್, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಪಾಲಿಕೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವರುಣ್ ಚೌಟ, ನಿಕಟಪೂರ್ವ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ.ಆಕಾಶ್ ರಾಜ್ ಜೈನ್, ಸಾಂಸ್ಕೃತಿಕ ಚಿಂತಕ ಡಾ. ಅರುಣ್ ಉಳ್ಳಾಲ, ಪುನರೂರು ಪ್ರತಿಷ್ಠಾನದ ದೇವಪ್ರಸಾದ್ ಪುನರೂರು, ಪತ್ರಕರ್ತೆ ಭುವನೇಶ್ವರಿ ದಿನೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net